Advertisement
ಇದರ ಜತೆಗೆ ಎನ್‌ಐಎ ತಮಿಳುನಾಡಿನ 5 ಜಿಲ್ಲೆಗಳ 10 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನೂ ನಡೆಸಿದೆ. ಈ ಮೂಲಕ ಉಗ್ರ ಸಂಘಟನೆಗಳಿಗೆ ಯುವಕರನ್ನು ಸೇರಿಸುವ ಜಾಲದ ಬಗ್ಗೆ ಬೃಹತ್ ತನಿಖೆಯನ್ನೂ ಕೈಗೊಂಡಿದೆ. ತನಿಖೆ ವೇಳೆ ಬಂಧಿತರು ಪ್ರಚೋದನ ಕಾರಿ ವಿಚಾರಧಾರೆಗಳ ಬಗ್ಗೆ ಆನ್‌ಲೈನ್ ಮೂಲಕ ತರಬೇತಿ ನೀಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಜತೆಗೆ ಭಾರತವನ್ನು ನಂಬಿಕೆ ರಹಿತರ ನಾಡು ಎಂದು ಬಿಂಬಿಸಲು ಮುಂದಾಗಿದ್ದರು.
ಜಮ್ಮು-ಕಾಶ್ಮೀರದ ರಿಯಾಸಿಯಲ್ಲಿ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಹಲವೆಡೆ ದಾಳಿ ನಡೆಸಿದೆ. ರಜೌರಿಯ 5 ಸ್ಥಳಗಳಲ್ಲಿ ನಡೆಸಲಾಗಿರುವ ದಾಳಿಯಲ್ಲಿ ಉಗ್ರ ಸಂಘಟನೆಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬವರ ನಿವಾಸಗಳಲ್ಲಿ ಶೋಧ ನಡೆಸಲಾಗಿದೆ.