Advertisement

ಉಗ್ರರಿಗೆ ಆರ್ಥಿಕ ನೆರವು ಉಗ್ರನ ಪುತ್ರ ಅರೆಸ್ಟ್‌

06:00 AM Aug 31, 2018 | Team Udayavani |

ಶ್ರೀನಗರ: ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಜಾಗತಿಕ ಉಗ್ರ ಸಯ್ಯದ್‌ ಸಲಾವುದ್ದೀನ್‌ನ 2ನೇ  ಪುತ್ರ ಸಯ್ಯದ್‌ ಶಕೀಲ್‌ ಯೂಸುಫ್ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ಬಂಧಿಸಿದೆ. ನವದೆಹಲಿಯ ಜನಪ್ರಿಯ ಆಸ್ಪತ್ರೆಯಲ್ಲಿ ಲ್ಯಾಬೋರೇಟರಿ ಅಸೆಸ್ಟೆಂಟ್‌ ಆಗಿ ಕೆಲಸ ಮಾಡುತ್ತಿರುವ ಆತನನ್ನು ಶ್ರೀನಗರದಲ್ಲಿ ಬಂಧಿಸಲಾಗಿದೆ. ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ನೆರವಿನಿಂದ ಆತನನ್ನು ಬಂಧಿಸಲಾಗಿದೆ. ಅಮೆರಿಕದಿಂದ ಏಜಾಜ್‌ ಅಹ್ಮದ್‌ ಭಟ್‌ ಎಂಬಾತನಿಂದ  ಶಕೀಲ್‌ಗೆ ಹಣ ಸಂದಾಯವಾಗುತ್ತಿತ್ತು ಎಂದು ಎನ್‌ಐಎ ಆರೋಪಿಸಿದೆ. ಹಣಕಾಸು ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲಿ ಎನ್‌ಐಎ ಕೇಸು ದಾಖಲಿಸಿಕೊಂಡಿತ್ತು.

Advertisement

ಇಬ್ಬರು ಉಗ್ರರ ಹತ್ಯೆ: ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೂರ ಜಿಲ್ಲೆಯ ಹಜಿನ್‌ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next