ಹೊಸದಿಲ್ಲಿ: ಅಮರಾವತಿ ಮತ್ತು ಅಕೋಲಾ ನಡುವಿನ 75 ಕಿಲೋಮೀಟರ್‌ಗಳ (ಕಿಮೀ) ಉದ್ದದ ಹೆದ್ದಾರಿಯನ್ನು ದಾಖಲೆಯ ಅವಧಿಯಲ್ಲಿ ಪೂರ್ಣಗೊಳಿಸುವ ಮೂಲಕ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಿನ್ನೆಸ್ ವಿಶ್ವ ದಾಖಲೆಯನ್ನೇ ನಿರ್ಮಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಮರಾವತಿ – ಅಕೋಲಾ ನಡುವಿನ ರಾಷ್ಟ್ರೀಯ ಹೆದ್ದಾರಿ 53 ಕಾಮಗಾರಿಯನ್ನು ಜೂನ್ 3ರಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಆರಂಭಗೊಳಿಸಿ ಜೂ.7ರ ಸಂಜೆ 5:00 ಗಂಟೆಗೆ ಒಟ್ಟು 105 ಗಂಟೆ 33 ನಿಮಿಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ವಿಶ್ವ ದಾಖಲೆಯನ್ನೇ ಬರೆದಿದೆ.
ಈ ಒಂದು ಕಾಮಗಾರಿಯಲ್ಲಿ ಎನ್‌ಎಚ್‌ಎಐನ 800 ಉದ್ಯೋಗಿಗಳು ಮತ್ತು ಸ್ವತಂತ್ರ ಸಲಹೆಗಾರರು ಸೇರಿದಂತೆ ಖಾಸಗಿ ಕಂಪನಿಯ 720 ಕಾರ್ಮಿಕರ ತಂಡವು ಸೇರಿ ಈ ಕಾರ್ಯವನ್ನು ದಾಖಲೆ ಸಮಯದಲ್ಲಿ ಪೂರ್ಣಗೊಳಿಸಲು ಸಫಲರಾಗಿದ್ದಾರೆ.
ರಾಜ್ ಪಥ್ ಇನ್ಫ್ರಾ ಕಾಮ್ ಪ್ರೈವೆಟ್ ಲಿಮಿಟೆಡ್ ಮತ್ತು ಜಗದೀಶ್ ಕದಂ ಕಂಪೆನಿಗಳಿಂದ ಈ ಅತೀ ದೊಡ್ಡ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದ್ದು ಈ ಸಾಧನೆ ಕುರಿತು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸಾಗರ ತಾಲೂಕಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊರತೆ: ಗೋಪಾಲಕೃಷ್ಣ ಬೇಳೂರು
ಇಡೀ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ : ಕಡಿಮೆ ಅವಧಿಯಲ್ಲಿ ಅತೀ ಉದ್ದದ ಹೆದ್ದಾರಿ ನಿರ್ಮಾಣ ಮಾಡಿದ NHAI, ಹಾಗೂ ರಾಜ್ ಪಥ್ ಇನ್ಫ್ರಾ ಕಾನ್ ಪ್ರೈವೆಟ್ ಲಿಮಿಟೆಡ್ ಮತ್ತು ಜಗದೀಶ್ ಕದಂ ಕಂಪೆನಿ ಸೇರಿ ಇಷ್ಟು ದೊಡ್ಡ ಕಾರ್ಯ ಮಾಡಿದ್ದಕ್ಕಾಗಿ ಸಚಿವ ನಿತಿನ್ ಗಡ್ಕರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.