Advertisement

ಕೈಸೇರದ ರಾ.ಹೆ. ಕಾಮಗಾರಿ ವರದಿ

03:45 AM Feb 09, 2017 | |

ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ ಜಂಟಿಯಾಗಿ ಜಿಲ್ಲಾಧಿಕಾರಿಗೆ ನೀಡಬೇಕಾದ ರಾ.ಹೆ. ಕಾಮಗಾರಿ ಪ್ರಗತಿ ವರದಿಯನ್ನು ಬುಧವಾರ ನೀಡಿಲ್ಲ.

Advertisement

ಫೆ. 4ರಂದು ನಡೆದ ಸಭೆಯಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ನಾಲ್ಕು ದಿನಗಳೊಳಗೆ ಶೇ. 90 ಕಾಮಗಾರಿ ಆಗಿದೆಯೆ ಎಂಬ ಕುರಿತು ವರದಿ ಸಲ್ಲಿಸಲು ಸೂಚಿಸಿದ್ದರು.

ತಡೆಯುವಂತಿಲ್ಲ: ಡಿಸಿ
“ಉದಯವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ವರದಿ ಇನ್ನೂ ಕೈಸೇರಿಲ್ಲ. ಗುರುವಾರ ಬರಬಹುದು ಎಂದರು. ಟೋಲ್‌ ಸಂಗ್ರಹ ಕುರಿತು ಪ್ರಶ್ನಿಸಿದಾಗ, ನಾವು ಟೋಲ್‌ ಸಂಗ್ರಹ ತಡೆಯುವಂತಿಲ್ಲ. ಆದ ಕಾಮಗಾರಿಯ ಪ್ರಗತಿ ಆಧಾರದಲ್ಲಿ ಟೋಲ್‌ ಸಂಗ್ರಹ ಮಾಡಲಾಗುತ್ತದೆ. ಕುಂದಾಪುರದ ಕಾಮಗಾರಿ ವಿಳಂಬವಾಗಲು ಎರಡನೇ ಬಾರಿ ಪರಿಷ್ಕೃತವಾದುದು ಕಾರಣ. ಪಡುಬಿದ್ರಿಯಲ್ಲಿ ಮೊದಲು ಬೈಪಾಸ್‌ ಎಂದಿತ್ತು. ರಾಜ್ಯದಿಂದ ಆದ ನಿರ್ಧಾರದಂತೆ ಪ್ರಸ್ತುತ ಇರುವ ಮಾರ್ಗದಲ್ಲಿಯೇ ಮುಂದುಧಿವರಿಯುತ್ತಿದೆ. ಮಂಗಳೂರಿನಲ್ಲಿ ಟೋಲ್‌ ಸಂಗ್ರಹಕ್ಕೆ ಜಿಲ್ಲಾಡಳಿತ ಪೊಲೀಸ್‌ ರಕ್ಷಣೆ ನೀಡಿಯಾಗಿದೆ. ನಾವು ಪೊಲೀಸ್‌ ರಕ್ಷಣೆ ನೀಡಿದ ಬಳಿಕ ಆರಂಭವಾಗಲಿದೆ ಎಂದರು.

ಗುಂಡ್ಮಿ ಸಾಸ್ತಾನ ಮತ್ತು ಪಡುಬಿದ್ರಿಯಲ್ಲಿ ಟೋಲ್‌ಗೇಟ್‌ನಲ್ಲಿ ಬುಧವಾರ ಟೋಲ್‌ ಸಂಗ್ರಹವಾಗಲಿಲ್ಲ. ಆದರೆ ಸ್ಥಳೀಯ ನಾಗರಿಕ ಸಮಿತಿಯವರು ಟೋಲ್‌ ಸಂಗ್ರಹದ ವಿರುದ್ಧ ಗುರುವಾರ ಸಂಜೆ 5ಕ್ಕೆ ಸಾಸ್ತಾನ ಶಿವಕೃಪಾ ಸಭಾಭವನದಲ್ಲಿ ಸಭೆ ಕರೆದಿದ್ದಾರೆ. ಪಡುಬಿದ್ರಿಯಲ್ಲಿ ಬುಧವಾರ ಪ್ರಯೋಗಾರ್ಥ ಎರಡು ಮತ್ತು ಮೂರು ಚಕ್ರದ ವಾಹನಗಳನ್ನು ಕೊನೆಯ ಪಥದಲ್ಲಿ ಚಲಿಸಲು ಸೂಚಿಸಿದ್ದಾರೆ.

ತಲಪಾಡಿಯಲ್ಲಿ ಟೋಲ್‌ ಸಂಗ್ರಹ ಆರಂಭವಾದ ಸುದ್ದಿ ಕೇಳುತ್ತಲೇ ಪಡುಬಿದ್ರಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next