Advertisement
ಕಾಪು ಮೆಸ್ಕಾಂ ಮುಂಭಾಗ ಮತ್ತು ಫ್ಲೆ ಓವರ್ ಬಳಿ, ಮೂಳೂರು, ಪಾಂಗಾಳ ಕಟ್ಟಿಕೆರೆ ಬಳಿ, ಕಟಪಾಡಿ ಕಲ್ಲಾಪು ಸೇತುವೆ ಬಳಿ ಮತ್ತು ಉದ್ಯಾವರದಲ್ಲಿ ಹೆದ್ದಾರಿ ಮಧ್ಯ ಬಿದ್ದಿರುವ ಬೃಹದಾಕಾರಾದ ಹೊಂಡಗಳು ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ.
ಹೆದ್ದಾರಿಯಲ್ಲಿನ ವಾಹನ ಒತ್ತಡದಿಂದಾಗಿ ಮತ್ತು ಮಳೆಯಿಂದಾಗಿ ಹೊಂಡ ದೊಡ್ಡದಾಗುತ್ತಾ ಹೋಗುತ್ತಿದೆ. ಒಂದು ವೇಳೆ ಹೊಂಡಗಳು ಮತ್ತಷ್ಟು ವಿಸ್ತರಣೆ ಗೊಂಡರೆ ಅಪಘಾತಕ್ಕೆ ಕಾರಣವಾಗುತ್ತದೆ. ಜತೆಗೆ ವಾಹನ ವೇಗಕ್ಕೂ ಹೊಂಡಗಳು ಅಡ್ಡಿಯಾಗುತ್ತಿವೆ. ಹೆದ್ದಾರಿಯಾದ್ದರಿಂದ ವಾಹನಗಳು ಸಾಕಷ್ಟು ವೇಗದಲ್ಲಿ ಸಾಗುತ್ತಿದ್ದು ಹೊಂಡ ಕಂಡುಬಂದಲ್ಲಿ ಬ್ರೇಕ್ ಹಾಕುವುದರಿಂದ ಅಪಘಾತಗಳಿಗೆ ಎಡೆಮಾಡುತ್ತದೆ. ದುರಸ್ತಿಗೆ ಸೂಚನೆ
ಹೆದ್ದಾರಿಯಲ್ಲಿನ ಹೊಂಡಗಳನ್ನು ಮುಚ್ಚುವಂತೆ ಹೆದ್ದಾರಿ ಇಲಾಖೆಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಆದರೆ ಈವರೆಗೂ ಕ್ರಮ ಕೈಗೊಂಡಿಲ್ಲ.
– ನಿತ್ಯಾನಂದ ಗೌಡ, ಕಾಪು ಎಸ್‌ಐ