Advertisement
ರಸ್ತೆ ವಿಸ್ತರಣೆಯ ಕಾಮಗಾರಿ ನಡೆಯುವಾಗ ಉಡುಪಿ-ಮಣಿಪಾಲ ಮಾರ್ಗದ ಕೆಲವು ಪ್ರದೇಶಗಳಲ್ಲಿ ರಸ್ತೆಯನ್ನು ಏಳೆಂಟು ಅಡಿ ಎತ್ತರ ಹಾಗೂ ಮಣಿಪಾಲ-ಉಡುಪಿ ಮಾರ್ಗದಲ್ಲಿ ಅದೇ ಕೆಲವು ಅಡಿ ತಗ್ಗು ಮಾಡಲಾಗಿದೆ. ಇದರಿಂದಾಗಿ ಹೆದ್ದಾರಿಯಿಂದ ವಿವಿಧ ಪ್ರದೇಶ ಗಳಿಗೆ ಸಂಪರ್ಕ ಕಲ್ಪಿಸುವ ಉಪರಸ್ತೆ ಗಳು ಸಂಪೂರ್ಣ ಸಂಪರ್ಕ ಕಳೆದು ಕೊಂಡಿವೆ.
ಅಸುಪಾಸಿನ ಜಾಗ ಕೊರೆದು ರಸ್ತೆ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ರಸ್ತೆಯ ಸಮೀಪ ವಾಸಿಸುವರಿಗೆ ಗೃಹ ದಿಗ್ಬಂಧನದ ರೀತಿ ಆಗಿದೆ. ಕೆಲವೊಂದು ಮನೆಗಳು ರಸ್ತೆಯಿಂದ ಕೆಲವು ಅಡಿ ಕೆಳಗೆ ಇನ್ನೂ ಕೆಲವೊಂದು ಮನೆಗಳು ರಸ್ತೆಗಿಂತ ಕೆಲವು ಅಡಿ ಎತ್ತರ ದಲ್ಲಿರುವುದರಿಂದ ರಸ್ತೆಗೆ ಬರುವ ಅವಕಾಶ ವಿಲ್ಲವಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿಲ್ಲ. ಮಳೆಗಾಲಕ್ಕಿಂತ ಮೊದಲು ಈ ಕಾಮಗಾರಿ ಮುಗಿಯದಿದ್ದಲ್ಲಿ ಮತ್ತಷ್ಟು ಸಮಸ್ಯೆಯಾಗುವುದು ಖಚಿತ.
Related Articles
ಅವೈಜ್ಞಾನಿಕ ಕಾಮಗಾರಿಯಿಂದ ಸ್ಥಳೀಯರಿಗೆ ತೊಂದರೆಯಾಗಿದೆ. ಮಕ್ಕಳು ಮನೆಯಿಂದ ಹೊರಗೆ ಹೋಗುವಂತಿಲ್ಲ. ಹೆದ್ದಾರಿ ಸಂಪರ್ಕಿಸ ಬೇಕಾದರೆ ದೊಡ್ಡ ಸಾಹಸ ಮಾಡಬೇಕಾಗಿದೆ. ಸ್ಥಳೀಯರ ಅಭಿಪ್ರಾಯ ತೆಗೆದುಕೊಳ್ಳದೆ ಯಾರೋ ಮಾಡಿರುವ ಪ್ರಾಜೆಕ್ಟ್ ಡಿಸೈನ್‌ಗೆ ಯಾರೋ ಒಪ್ಪಿಗೆ
ನೀಡಿದಂತೆ ಇದೆ.
– ಡಾ| ಸುರೇಶ್ ಶೆಣೈ, ಲಕ್ಷ್ಮೀಂದ್ರನಗರ ನಿವಾಸಿ
Advertisement
ಕಾಮಗಾರಿ ಅನಂತರ ಕೂಡುರಸ್ತೆ ನಿರ್ಮಾಣರಸ್ತೆ ಕಾಮಗಾರಿ, ಡ್ರೈನೇಜ್ ಕಾಮಗಾರಿ ಸಂಪೂರ್ಣ ಮುಗಿದ ತತ್‌ಕ್ಷಣ ಕೂಡು ರಸ್ತೆಗಳನ್ನು ಮಾಡಿಕೊಡಲಾಗುತ್ತದೆ.
– ಮಂಜುನಾಥ ನಾಯಕ್, ಎಂಜಿನಿಯರ್ ರಾ.ಹೆ. ಹಿಂದಿನಂತೆ ಎಲ್ಲೆಂದರಲ್ಲಿ ದಾಟುವಂತಿಲ್ಲ
ಸಾರ್ವಜನಿಕರು ಹಿಂದಿನಂತೆ ರಾ.ಹೆ. ಎಲ್ಲೆಂದರಲ್ಲಿ ದಾಟುವಂತಿಲ್ಲ. ಎಚ್ಚರಿಕೆ ವಹಿಸಿದೆ ದಾಟಲು ಪ್ರಯತ್ನಿಸಿದರೆ ಅಪಾಯ ಖಂಡಿತ.
– ವಿನಾಯಕ ಕಾಮತ್, ಇಂದ್ರಾಳಿ