Advertisement

ಸ್ಟಾರ್‌ ಫ‌ುಟ್ಬಾಲಿಗ ನೇಯ್ಮರ್‌ ಸೇರಿದಂತೆ ಮೂವರಿಗೆ ಕೋವಿಡ್

07:16 PM Sep 03, 2020 | mahesh |

ಪ್ಯಾರಿಸ್‌: ಪ್ಯಾರಿಸ್‌ ಸೇಂಟ್‌ ಜರ್ಮೈನ್‌ ತಂಡದ (ಪಿಎಸ್‌ಜಿ) ಸ್ಟಾರ್‌ ಫ‌ುಟ್ಬಾಲಿಗರಾದ ನೇಯ್ಮರ್‌, ಆ್ಯಂಜೆಲ್‌ ಡಿ ಮರಿಯ ಮತ್ತು ಲಿಯಾಂಡ್ರೊ ಪಾರಿಯೋಸ್‌ ಅವರಿಗೆ ಕೋವಿಡ್ ಪಾಸಿಟಿವ್‌ ದೃಢಪಟ್ಟಿದೆ. ಆದರೂ ಲೀಗ್‌-1 ಸೀಸನ್‌ ಆರಂಭಗೊಂಡಿದೆ.

Advertisement

ಸೋಮವಾರ ತನ್ನ ತಂಡದ ಇಬ್ಬರಿಗೆ ಕೋವಿಡ್ ಅಂಟಿದ್ದನ್ನು ಪಿಎಸ್‌ಜಿ ಪ್ರಕಟನೆಯಲ್ಲಿ ತಿಳಿಸಿತ್ತು. ಆದರೆ ಇವರ ಹೆಸರನ್ನು ಗೌಪ್ಯವಾಗಿ ಇರಿಸಿತ್ತು. ಈಗ ಈ ಯಾದಿಗೆ ಇನ್ನೋರ್ವ ಆಟಗಾರನ ಸೇರ್ಪಡೆಯಾಗಿದೆ ಎಂದು ವರದಿಯಾಗಿದ್ದು, ಮಾಧ್ಯಮವೊಂದು ಈ ಮೂವರ ಹೆಸರನ್ನು ಉಲ್ಲೇಖೀಸಿದೆ.

Advertisement

Udayavani is now on Telegram. Click here to join our channel and stay updated with the latest news.

Next