Advertisement

ಆಸ್ಕರ್‌ಗೆ ಆಯ್ಕೆಯಾದ ನ್ಯೂಟನ್‌; ಚಿತ್ರ ಕಾಪಿ ಮಾಡಿದ್ದೆ? 

04:04 PM Sep 23, 2017 | |

ಮುಂಬಯಿ: ಎಲ್ಲರ ಹುಬ್ಬೇರಿಸುವಂತೆ ಬ್ಲಾಕ್‌ ಬಸ್ಟರ್‌ ಹಿಟ್‌ ಬಾಹುಬಲಿ ಚಿತ್ರ ಸೇರಿದಂತೆ ಭಾರತದ ವಿವಿಧ ಭಾಷೆಗಳ 26 ಚಿತ್ರಗಳನ್ನು ಹಿಂದಿಕ್ಕಿ ಬಾಲಿವುಡ್‌ನ‌ ‘ನ್ಯೂಟನ್‌’ ಚಿತ್ರ ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದಿದೆ. 

Advertisement

ಅಮಿತ್‌ ಮಸುರ್ಕರ್‌ ನಿರ್ದೇಶನದ ಪ್ರತಿಭಾನ್ವಿತ ನಟ ರಾಜ್‌ಕುಮಾರ್‌ ರಾವ್‌ ಅಭಿನಯದ ಈ ಚಿತ್ರ ನಕ್ಸಲ್‌ ಪೀಡಿತ ಛತ್ತೀಸ್‌ಘಡದ ದಟ್ಟಾರಣ್ಯದಲ್ಲಿ ನಡೆಯುವ ಚುನಾವಣೆಯ ಕಥಾ ಹಂದರವನ್ನು ಹೊಂದಿದೆ.ಚಿತ್ರದಲ್ಲಿ ರಾಜ್‌ಕುಮಾರ್‌ ರಾವ್‌ ನ್ಯೂಟನ್‌ ಕುಮಾರ್‌ ಎಂಬಾ  ಚುನಾವಣಾ ಕ್ಲರ್ಕ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನ್ಯೂಟನ್ ಚಿತ್ರ ಆಸ್ಕರ್‌ನಲ್ಲಿ  ಅತ್ಯುತ್ತಮ 5 ವಿದೇಶಿ ಭಾಷೆಯ ಸಿನಿಮಾಗಳ ಜೊತೆ ಸ್ಪರ್ಧಿಸಲಿದೆ. ಈವರೆಗೆ ಮದರ್ ಇಂಡಿಯಾ, ಸಲಾಂ ಬಾಂಬೆ ಮತ್ತು ಲಗಾನ್  ಚಿತ್ರಗಳು ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಬಾಲಿವುಡ್‌ ಚಿತ್ರಗಳು. 

ಚಿತ್ರ ಕಾಪಿಯೇ ? 

ಚಿತ್ರ ಆಸ್ಕರ್‌ಗೆ ಆಯ್ಕೆಯಾದ ಬೆನ್ನಲ್ಲೇ ಚಿತ್ರವನ್ನು ಇರಾನ್‌ನ ಜನಪ್ರಿಯ ಚಿತ್ರ ‘ಕಾಪಿ ಆಫ್ ಬ್ಯಾಲೆಟ್‌’ನ ನಕಲು ಎಂದು ಕೆಲವರು ಹೇಳಿದ್ದಾರೆ. ವಿಶೇಷವೆಂದರೆ ಚಿತ್ರದ ಕಥಾ ವಸ್ತು ಮತ್ತು ಪರಿಕಲ್ಪನೆ ಒಂದೇ ಆಗಿದೆ. 

Advertisement

ಅಮೆರಿಕದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಸೈನ್ಸ್‌ ಅಧಿಕೃತವಾಗಿ ಆಸ್ಕರ್‌ ಅಕಾಡೆಮಿ ಪ್ರಶಸ್ತಿಗಳನ್ನು ನೀಡುತ್ತದೆ. ಕಲಾತ್ಮಕ ಮತ್ತು ತಾಂತ್ರಿಕತೆಗಾಗಿ 24 ಪ್ರಶಸ್ತಿಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next