Advertisement

ಪತ್ರಿಕಾ ಜಾಹೀರಾತು ಶೇ. 35ರಷ್ಟು ವೃದ್ಧಿ?

10:36 AM Feb 19, 2021 | Team Udayavani |

ನವದೆಹಲಿ: 2020ರಲ್ಲಿ ಕೊರೊನಾದಿಂದಾಗಿ ನರಳಿದ್ದ ಭಾರತೀಯ ಮುದ್ರಣ ಮಾಧ್ಯಮಕ್ಕೆ ಈ ವರ್ಷ ಶೇ. 35ರಷ್ಟು ಜಾಹೀರಾತು ಆದಾಯ ವೃದ್ಧಿಯಾಗಲಿದ್ದು, ಈ ಬಾರಿ 16,100 ಕೋಟಿ ರೂ. ಮೊತ್ತದಷ್ಟು ಜಾಹೀರಾತುಗಳು ಸಿಗಲಿವೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ಪಿಚ್‌ ಮ್ಯಾಡಿಸನ್‌ ಅಡ್ವಟೈಸಿಂಗ್‌ ಎಂಬ ಸಂಸ್ಥೆ ತಯಾರಿಸಿರುವ ಈ ವರದಿಯಲ್ಲಿ, ಈ ರೀತಿ ಹೇಳಲಾಗಿದೆ.

Advertisement

ಒಟ್ಟಾರೆಯಾಗಿ, ಭಾರತೀಯ ಮಾಧ್ಯಮ ರಂಗಕ್ಕೆ ಜಾಹೀರಾತು ಪ್ರಮಾಣ ಶೇ. 26ರಷ್ಟು ಹೆಚ್ಚಾಗಲಿದ್ದು, 68,325 ಕೋಟಿ ರೂ. ಮೊತ್ತದ ಜಾಹೀರಾತು ಹರಿದುಬರಲಿದೆ. 2020ರಲ್ಲಿ ಕೊರೊನಾ ಲಾಕ್‌ಡೌನ್‌ನಿಂದಾಗಿ ನಷ್ಟ ಅನುಭವಿಸಿದ್ದ ಕಂಪನಿಗಳು ತಮ್ಮ ಜಾಹೀರಾತು ವೆಚ್ಚವನ್ನು ಶೇ. 20ರಷ್ಟು ಕಡಿತ ಮಾಡಿದ್ದವು. ಆ ನಷ್ಟದಿಂದ ಕಂಪನಿಗಳೂ ಈಗ ಮೇಲೆದ್ದಿದ್ದು, ಅದರ ಲಾಭ ಮಾಧ್ಯಮಗಳಿಗೂ ಆಗಲಿದೆ ಎಂಬುದು ಸಮೀಕ್ಷೆಯ ಒಟ್ಟಾರೆ ಸಾರಾಂಶವಾಗಿದೆ.

ಈ ವರ್ಷ ಯಾರಿಂದ ಸಿಂಹಪಾಲು?
ಈ ವರ್ಷ ಮಾಧ್ಯಮಗಳಿಗೆ ಸಿಗುವ ಜಾಹೀರಾತುಗಳಲ್ಲಿ ಸಿಂಹಪಾಲು ಜಾಹೀರಾತುಗಳು “ತ್ವರಿತವಾಗಿ ಮಾರಾಟ ವಾಗುವ ಸರಕುಗಳ ರಂಗ’ದಿಂದಲೇ (ಎಫ್ಎಂಸಿಜಿ) ಹರಿದುಬರಲಿದೆ.

ಲಾಕ್‌ಡೌನ್‌ ಮುಗಿದ ನಂತರ ಈ ರಂಗ ಜಾಹೀರಾತುಗಳಿಗಾಗಿ ಮೀಸಲಿಡುವ ಮೊತ್ತವನ್ನು ಶೇ. 38ರಷ್ಟು ಹೆಚ್ಚಿಸಿಕೊಂಡಿವೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ. ಇನ್ನುಳಿದಂತೆ, ಇ-ಕಾಮರ್ಸ್‌ ರಂಗದ ಸಂಸ್ಥೆಗಳು ಶೇ. 30ರಷ್ಟು ಜಾಹೀರಾತು ನೀಡಿದರೆ, ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳು ಶೇ. 9ರಷ್ಟು ಜಾಹೀರಾತು ಬಜೆಟ್‌ ಅನ್ನು ಹೆಚ್ಚು ಮಾಡಿವೆ ಎಂದು ಹೇಳಲಾಗಿದೆ.

ಮತ್ತೂಂದೆಡೆ, ಗ್ರೂಪ್‌-ಎಂ ಎಂಬ ಸಂಸ್ಥೆ ಕೂಡ ತನ್ನದೇ ಆದ ವರದಿಯೊಂದನ್ನು ಸಿದ್ಧಪಡಿಸಿದ್ದು ಅದರಲ್ಲಿ 2021 ರಲ್ಲಿ ಭಾರತೀಯ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ರಂಗಗಳಿಗೆ ಅವರು ಸಾಮಾನ್ಯವಾಗಿ ಪಡೆಯುತ್ತಿದ್ದ ಜಾಹೀರಾತುಗಳಿಗಿಂತ ತಲಾ ಶೇ. 23ರಷ್ಟು ಜಾಹೀರಾತು ವೃದ್ಧಿ ಕಾಣಲಿವೆ ಎಂದು ಅಂದಾಜಿಸಿದೆ.

Advertisement

*16,100 ಕೋಟಿ ರೂ. ಮುದ್ರಣ ಮಾಧ್ಯಮಕ್ಕೆ ಹರಿದು ಬರಲಿರುವ ಜಾಹೀರಾತುಗಳ ಅಂದಾಜು ಮೊತ್ತ

*68,325 ಕೋಟಿ ರೂ. ಭಾರತೀಯ ಮಾಧ್ಯಮ ರಂಗಕ್ಕೆ ಹರಿದು ಬರಲಿರುವ ಒಟ್ಟಾರೆ ಜಾಹೀರಾತು ಮೊತ್ತ

Advertisement

Udayavani is now on Telegram. Click here to join our channel and stay updated with the latest news.

Next