Advertisement

ತಮಿಳುನಾಡು: ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ..!

02:16 PM May 20, 2022 | Team Udayavani |

ತಮಿಳುನಾಡು:  31 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮೂವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ನಾಲ್ಕನೇ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮೇ 18 ರ ಬುಧವಾರ ರಾತ್ರಿ ಚೆಂಗಲ್‌ಪೇಟ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ.

Advertisement

ಪೊಲೀಸರ ಪ್ರಕಾರ, ಸಂತ್ರಸ್ತೆ ತನ್ನ ಬಾಲ್ಯದಿಂದಲೂ ವಿಕಲ ಚೇತನಳಾಗಿದ್ದು, ಆಕೆಯ ಪೋಷಕರು ಕೃಷಿ ಕೆಲಸಗಾರರಾಗಿದ್ದು, ಆಕೆಯನ್ನು ಮನೆಯಲ್ಲಿ ಒಬ್ಬಂಟಿಯಾಗಿ ಬಿಡುತ್ತಿದ್ದರು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಎಲ್ಲಾದರು ಇರು…ಕೆನಡಾ ಸಂಸತ್ ನಲ್ಲಿ ಕನ್ನಡ ಕಲರವ; ವಿಡಿಯೋ ವೈರಲ್

ಕುಡಿದ ಅಮಲಿನಲ್ಲಿ ನಾಲ್ವರು ಮನೆಗೆ ನುಗ್ಗಿ ಆಕೆ ಕಿರುಚದಂತೆ ಬಾಯಿ ಬಿಗಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  “ಅವರು ಆಕೆಯನ್ನು ಆರೋಪಿಯ ಮನೆಯ ಟೆರೇಸ್‌ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯಲ್ಲಿ ಸಂತ್ರಸ್ತೆಯ ಕೂಗು ಕೇಳಿ ಸ್ಥಳೀಯ ಮಹಿಳೆಯೊಬ್ಬರು ಆಕೆಯನ್ನು ಹುಡುಕಿಕೊಂಡು ಬಂದರು ಮತ್ತು ಸ್ಥಳೀಯರನ್ನು ಕರೆದು ಎಚ್ಚರಿಸಿದ ಕೆಲವೇ ಕ್ಷಣಗಳಲ್ಲಿ ನಾಲ್ವರು ಆರೋಪಿಗಳು ಮನೆಯಿಂದ ಓಡಿ ಹೋಗಿದ್ದರು. ಸಂತ್ರಸ್ತೆ ನೋವಿನಿಂದ ನರಳುತ್ತಿರುವುದನ್ನು ಗಮನಿಸಿದ ಸ್ಥಳಿಯರು ಆಕೆಯನ್ನು ಚಿಕಿತ್ಸೆಗಾಗಿ ಚೆಂಗಲಪೇಟೆಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next