ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವೆ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಕ್ ಸಮರ ತಾರಕಕ್ಕೇರಿದ್ದು ಇಬ್ಬರು ನಾಯಕರ ನಡುವೆ “ಬೀದಿ ರಂಪಾಟ’ ಪ್ರಾರಂಭವಾಗಿದೆ.
ಉಭಯ ನಾಯಕರು ಆರೋಪ-ಪ್ರತ್ಯಾರೋಪ ಕಟು ಟೀಕೆಗಳು ಪರಾಕಾಷ್ಠೆ ತಲುಪಿದ್ದು, ವೈಯಕ್ತಿಕ ನಿಂದನೆ, ಏಕವಚನ ಪ್ರಯೋಗ ಹಂತಕ್ಕೂ ಹೋಗಿದ್ದು ವಿಧಾನಸಭೆ ಚುನಾವಣೆ ಇನ್ನೂ ಒಂದು ವರ್ಷ ಇರುವಾಗಲೇ ರಾಜಕೀಯ ಕದನ ಆರಂಭವಾದಂತಿದೆ.
“ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರಿಂ ದ ನಾನು ಪಾಠ ಕಲಿಯಬೇಕಿಲ್ಲ. ಬಿಜೆಪಿ ಮುಖಂಡರು ಭ್ರಷ್ಟಾಚಾರದಲ್ಲಿ ಕಮ್ಮಿಯೇನಲ್ಲ. ಅವರ ಬಗ್ಗೆಯೂ ತನಿಖೆ ಮಾಡಿಸಿ, ದಾಖಲೆಗಳನ್ನು ತೆಗೆಸಿ ಬಣ್ಣ ಬಯಲು ಮಾಡುತ್ತೇನೆ’ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ತಾಕತ್ತಿದ್ದರೆ ದಾಖಲೆಗಳನ್ನು ಬಹಿರಂಗ ಮಾಡಿ ಎಂದು ಸವಾಲು ಹಾಕಿದರು.
ರಾಜ್ಯ ಸರ್ಕಾರದ ವಿರುದ್ದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಿಎಂ ವಿರುದ್ದ ಅವರು ವಾಕ್ಸಮರವನ್ನೇ ನಡೆಸಿದ್ದಾರೆ. ಮುಂದಿನ ವಿಧಾನಸ ಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅಧಿಕಾರ ವಹಿಸಿಕೊಂಡ 24 ಗಂಟೆಗಳಲ್ಲಿ ಮುಖ್ಯಮಂತ್ರಿ, ಅವರ ಕುಟುಂಬ ದವರು ಸೇರಿ ಉಳಿದವರು ಮಾಡಿದ ಹಗರಣಗಳ ಬಗ್ಗೆ ತನಿಖೆ ಮಾಡಿಸುತ್ತೇನೆ. ಯಾರ್ಯಾರನ್ನು ಯಾವ್ಯಾವ ಜೈಲಿಗೆ ಸೇರಿಸ ಬೇಕೋ ಅದಕ್ಕೆ ಸಿದಟಛಿನಿದ್ದೇನೆ. ಆಗ ನಿಮ್ಮ ಸರ್ಕಾರದ ಭ್ರಷ್ಟಾಚಾರದ ವಾಸ್ತವಿಕ ಸಂಗತಿ ಬಯಲಾಗುತ್ತದೆ ಎಂದು ಹೇಳಿದರು.
ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿದ್ದರೂ ಸಿದ್ದರಾಮಯ್ಯ ಅದನ್ನು ತನಿಖೆ ಮಾಡದೆ ಮುಚ್ಚಿಹಾಕುತ್ತಿದ್ದಾರೆ. ನಿಮ್ಮ ಸಚಿವರು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ 170 ಕೋಟಿ ರೂ. ಅಕ್ರಮ ಆಸ್ತಿ ಸಿಕ್ಕಿದ್ದು ಸುಳ್ಳಾ? ಹೀಗಿದ್ದರೂ ಅವರನ್ನು ಸಚಿವ ಸ್ಥಾನದಲ್ಲಿ ಹೇಗೆ ಮುಂದುವರಿಸಿದ್ದೀರಾ? ಭ್ರಷ್ಟ ಸಚಿವರನ್ನು ಇಟ್ಟುಕೊಂಡು ಹಗಲು ದರೋಡೆ, ಲೂಟಿ ಮಾಡಿಕೊಂಡು ಬಿಜೆಪಿ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದೀರಾ? ನಿಮ್ಮ ಬೆದರಿಕೆಗೆ ಜಗ್ಗುವವ ಈ ಯಡಿಯೂರಪ್ಪ ಅಲ್ಲ. ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸುವುದಿಲ್ಲ ಎಂದು ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.
ರಾಜಕೀಯದಿಂದ ನಿವೃತ್ತಿ: ಬೆಂಗಳೂರಲ್ಲಿ ನಿರ್ಮಿಸಲು ಉದ್ದೇಶಿಸಿ ರುವ ಉಕ್ಕಿನ ಸೇತುವೆ ಕಾಮಗಾರಿಗಾಗಿ ಮುಖ್ಯಮಂತ್ರಿ ಮತ್ತು ಅವರ ಶಿಷ್ಯರಿಗೆ 65 ಕೋಟಿ ರೂ. ಕಮಿಷನ್ ಸಂದಾಯವಾಗಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಡೈರಿಯಲ್ಲಿ ನಮೂದಾಗಿದೆ ಎಂಬ ಆರೋಪವನ್ನು ಪುನರುಚ್ಚರಿಸಿದ ಅವರು, ಈ ಆರೋಪ ಸುಳ್ಳು ಎಂಬುದು ಸಾಬೀತಾದರೆ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಬಿಎಸ್‌ವೈ ಸವಾಲು ಹಾಕಿದರು. ಯಡಿಯೂರಪ್ಪಗೆ ಸಿಎಂ ತಿರುಗೇಟು ಬಿಎಸ್‌ವೈ ಹೇಳಿಕೆಗೆ ಮತ್ತೆ ಗುಡುಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ದೇಶದಲ್ಲಿ ಯಾರಾದರೂ ನಂಬರ್ ಒನ್ ಭ್ರಷ್ಟರಿದ್ದರೆ ಅದು
ಬಿ.ಎಸ್.ಯಡಿಯೂರಪ್ಪ. ಅವರ ಮೇಲೆ 20 ಪ್ರಕರಣ ಇಟ್ಟುಕೊಂಡು ಬೇರೆಯವರ ಬಗ್ಗೆ ಮಾತಾಡ್ತಾರೆ. ಅವರು ಅಧಿಕಾರಕ್ಕೆ ಬಂದ್ರೆ ತಾನೇ ನನ್ನನ್ನು ಜೈಲಿಗೆ ಕಳಿಸೋದು ಎಂದು ಲೇವಡಿ ಮಾಡಿದ್ದಾರೆ. ಯಡಿಯೂರಪ್ಪ ಸುಳ್ಳುಗಾರ, ದಾಖಲೆ ಇಲ್ಲದೆ ಮಾತನಾಡುತ್ತಾರೆ. ತಾನು ಮಾಡಿದ್ದನ್ನೇ ಎಲ್ಲರೂ ಮಾಡುತ್ತಾರೆ ಎಂದುಕೊಂಡಿದ್ದಾರೆ. ಇಂತಹ ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ ಎಂದು ಹೇಳಿದ್ದಾರೆ.
“ಸಿದ್ದರಾಮಯ್ಯರನ್ನೇ ಬಯಲು ಮಾಡ್ತೀವಿ’
ಬೆಳಗಾವಿ: ಷಡ್ಯಂತ್ರ ಮಾಡಿದವರನ್ನು ಬೆತ್ತಲೆ ಗೊಳಿಸಲಾಗುವುದು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಭ್ರಷ್ಟಾಚಾರದಲ್ಲಿ ತೊಡಗಿದ ಮುಖ್ಯಮಂತ್ರಿಯನ್ನು ನಾವೂ
ಬೆತ್ತಲೆಗೊಳಿಸುತ್ತೇವೆ ಎಂದು ವಾಗ್ಧಾಳಿ ನಡೆಸಿದರು. ನಗರದಲ್ಲಿ ಕಾಂಗ್ರೆಸ್ ವಿರುದಟಛಿದ ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ತೊಡಗಿರುವ ಇವರೆಲ್ಲರನ್ನೂ ನಾವೇ ಬೆತ್ತಲೆ ಮಾಡುತ್ತೇವೆ. ಐಟಿ ದಾಳಿ ವೇಳೆ ಪತ್ತೆಯಾದ ಡೈರಿ ಹಾಗೂ ಸೀಡಿ ಬಗ್ಗೆ ತನಿಖೆಯಾಗಲಿ. ಆಮೇಲೆ ಎಲ್ಲವೂ ತಿಳಿಯುತ್ತದೆ ಎಂದು ಟೀಕಾಪ್ರಹಾರ ನಡೆಸಿದರು.