Advertisement

DD Kisan ವಾಹಿನಿಯಲ್ಲಿ ಇಂದಿನಿಂದ ಎಐ ನಿರೂಪಕರಿಂದ ಸುದ್ದಿ ವಾಚನ!

01:11 AM May 25, 2024 | Team Udayavani |

ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಪ್ರಸಾರ ಭಾರತಿಯ ದೂರದರ್ಶನ ಕಿಸಾನ್‌ ವಾಹಿನಿಯಲ್ಲಿ ಕೃತಕ ಬುದ್ಧಿಮತ್ತೆಯ ಇಬ್ಬರು ನಿರೂಪಕರು ಸುದ್ದಿ ವಾಚಿಸಲಿದ್ದಾರೆ. ಶನಿವಾರದಿಂದಲೇ ನೀವು ಎಐ ಸುದ್ದಿವಾಚಕರನ್ನು ನೋಡಬಹುದಾಗಿದೆ.

Advertisement

ಮಾನವರಂತೆ ಕಾಣುವ ಎಐ ಕ್ರಿಶ್‌ ಹಾಗೂ ಎಐ ಭೂಮಿ ಕಂಪ್ಯೂಟರ್‌ ನಿರೂಪಕರು 50 ಭಾರತೀಯ ಭಾಷೆ ಸೇರಿದಂತೆ ವಿದೇಶಿ ಭಾಷೆಗಳಲ್ಲೂ ಮಾತನಾಡಬಲ್ಲರು. ಜತೆಗೆ ದಿನದ 24 ಗಂಟೆ ವರ್ಷದ 365 ದಿನವೂ ನಿರಂತರವಾಗಿ ಸುದ್ದಿ ವಾಚಿಸಬಲ್ಲರು.

ಇದರಿಂದ ವೀಕ್ಷಕರಿಗೆ ಮುಖ್ಯವಾಗಿ ಕೃಷಿಕರಿಗೆ ಕೃಷಿ ಸಂಶೋಧನೆ, ಜಾಗತಿಕ ಕೃಷಿ ವಿದ್ಯಮಾನ, ಮಾರುಕಟ್ಟೆ ದರಗಳು, ಹವಾಮಾನ ಬದಲಾವಣೆ, ಸರಕಾರಿ ಯೋಜನೆಗಳ ಕುರಿತು ಮಾಹಿತಿ ದೊರೆಯಲಿದೆ. ಎಐ ತಂತ್ರಜ್ಞಾನ ಅಳವಡಿಕೆಯಿಂದ ಡಿಡಿ ಕಿಸಾನ್‌ ವಾಹಿನಿ ಹೊಸ ರೂಪ ಪಡೆಯಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next