Advertisement

ಪಾಕೆಟ್‌ನಲ್ಲಿ ನ್ಯೂಸ್‌ ರೀಡಿಂಗ್‌

04:37 AM Jun 15, 2020 | Team Udayavani |

ಅಂತರ್ಜಾಲದಲ್ಲಿ ನ್ಯೂಸ್‌ ಓದುವ ಅಭ್ಯಾಸ ಇರುವವರಿಗೆ ಸೂಕ್ತವಾದ ಆ್ಯಪ್‌ ಇದು. ಇಂದು ಯಾವ ಜಾಲತಾಣ ತೆರೆದರೂ, ಅಕ್ಕಪಕ್ಕ ಇಲ್ಲವೇ ಯಾವುದೋ ಒಂದು ಮೂಲೆಯಲ್ಲಿ ಸುದ್ದಿಗಳು, ಕುತೂಹಲಕರ ಮಾಹಿತಿಯನ್ನೊಳಗೊಂಡ  ಅಂಕಣಬರಹಗಳ ಕೊಂಡಿಯನ್ನು ಕಾಣಬಹುದು. ಎಷ್ಟೋ ಸಲ ಅಂಕಣಗಳನ್ನು ಓದಲು ಪುರುಸೊತ್ತು ಇರುವುದಿಲ್ಲ.

Advertisement

ಪಾಕೆಟ್‌ ಆ್ಯಪ್‌, ಈ ಸಮಯದಲ್ಲೇ ಸಹಾಯಕ್ಕೆ ಬರುತ್ತದೆ. ಇದನ್ನು ಎಕ್ಸ್‌ಟೆನ್ಶನ್‌ ಮುಖಾಂತರ, ಕಂಪ್ಯೂಟರ್‌  ಬ್ರೌಸರ್‌ನಲ್ಲೂ ಅಳವಡಿಸಿಕೊಳ್ಳ ಬಹುದು. ಆಗ ಪಾಕೆಟ್‌ನ ಆಯ್ಕೆ ಬ್ರೌಸರ್‌ ಮೇಲ್ಗಡೆ ನೆಲೆ ನಿಲ್ಲುತ್ತದೆ. ಇಂಟರ್ನೆಟ್‌ನಲ್ಲಿ ಕಾಣುವ ಯಾವುದೇ ಬರಹ ಇಷ್ಟವಾಯ್ತು ಎಂದರೆ, ಬ್ರೌಸರ್‌ ಮೇಲ್ಗಡೆ ಇರುವ ಪಾಕೆಟ್‌ ಆ್ಯಪ್‌ ಆಯ್ಕೆಗಳಲ್ಲಿ  ಆಡ್‌ ಬಟನ್‌ ಅನ್ನು ಕ್ಲಿಕ್ಕಿಸಬೇಕು.

ಆಗ ಆ ಬರಹದ ಕೊಂಡಿ ಸೇವ್‌ ಆಗುತ್ತದೆ. ಯಾವಾಗ ಬೇಕೋ ಆಗ, ಪಾಕೆಟ್‌ ಆಯ್ಕೆಯಲ್ಲಿರುವ ಮೈ ಲಿಸ್ಟ್‌ ಬಟನ್‌ ಕ್ಲಿಕ್‌ ಮಾಡಿದರೆ, ಮುಂದೆ ಓದಬೇಕೆಂದು ಇದುವರೆಗೂ ಸೇವ್‌ ಮಾಡಿದ ಬರಹಗಳ ಕೊಂಡಿ ಇರುವ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿರುವ ರೆಕಮಂಡೇಷನ್ಸ್‌ ಆಯ್ಕೆಯನ್ನು ಒತ್ತಿದರೆ, ಪಾಕೆಟ್‌ ಸಂಸ್ಥೆಯೇ ಆರಿಸಿದ ಉತ್ತಮ ಅಂಕಣಗಳ ಪಟ್ಟಿಯನ್ನು ಮುಂದಿರಿಸುತ್ತದೆ.

ಹೆಚ್ಚಿನ ಮಾಹಿತಿಗೆ: tinyurl.com/yarzaglq

Advertisement

Udayavani is now on Telegram. Click here to join our channel and stay updated with the latest news.

Next