Advertisement

ಸುದ್ದಿ ಕೋಶ: ಬರಲಿವೆ ನೇರಳೆ ಬಣ್ಣದ 100 ರೂ. ನೋಟು

06:00 AM Jul 20, 2018 | |

ನವದೆಹಲಿ: ಹೊಸ ಮಾದರಿಯ 100 ರೂ. ಮುಖಬೆಲೆಯ ನೋಟುಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ. ಗುರುವಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ಆರ್‌ಬಿಐ, ದಿವಾಸ್‌ನಲ್ಲಿರುವ ಆರ್‌ಬಿಐ ಮುದ್ರಣಾಲಯದಲ್ಲಿ ಹೊಸ ನೋಟುಗಳು ಮುದ್ರಣಗೊಳ್ಳುತ್ತಿದ್ದು, ಸದ್ಯದಲ್ಲೇ ಚಲಾವಣೆಗೆ ಬರಲಿವೆ ಎಂದಿದೆ. ಹೊಸ ನೋಟು ಬಳಕೆಗೆ ಬಂದ ನಂತರವೂ ಹಾಲಿ ಇರುವ 100 ರೂ. ನೋಟುಗಳು ಚಾಲ್ತಿಯಲ್ಲಿರಲಿವೆ ಎಂದು ಸ್ಪಷ್ಟಪಡಿಸಿದೆ. 

Advertisement

ಮುಂಭಾಗದಲ್ಲೇನಿದೆ? 
ಮಧ್ಯಭಾಗದಲ್ಲಿ 100 ವಾಟರ್‌ ಕಲರ್‌ಗಳ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಭಾವಚಿತ್ರ
 RBI, INDIA, 100 ಮತ್ತು

ಎಂಬ ಸೂಕ್ಷ್ಮ ಬರಹ. 
ದೇವನಾಗರಿ ಲಿಪಿಯಲ್ಲಿ 100 ರೂ. ಎಂದು ಗುರುತು. 
ಮಧ್ಯದ ಭದ್ರತಾ ದಾರದಲ್ಲಿ 

ಮತ್ತು RBI ಎಂಬ ಪದಗಳು. 
ಪ್ರತಿ ಪದಕ್ಕೂ ಅದಲು ಬದಲು ಬಣ್ಣ. 
ನೋಟನ್ನು ಬಾಗಿಸಿದರೆ ಮಧ್ಯದಲ್ಲಿನ ಭದ್ರತಾ ದಾರದ ಬಣ್ಣ ಹಸಿರಿನಿಂದ ನೀಲಿಗೆ ಬದಲು. 
ಭದ್ರತಾ ದಾರದ ಪಕ್ಕದಲ್ಲಿ, ನೋಟಿನ ಮೌಲ್ಯದ ಘೋಷಣೆ, ಆರ್‌ಬಿಐ ಗವರ್ನರ್‌ ಸಹಿ, ಆರ್‌ಬಿಐ ಲಾಂಛನ. 

ಹಿಂಭಾಗದಲ್ಲೇನಿದೆ?
ಹಿಂಬದಿಯಲ್ಲಿ ಯುನೆಸ್ಕೋ ಮಾನ್ಯತೆ ಪಡೆದ ಗುಜರಾತ್‌ನ ಐತಿಹಾಸಿಕ “ರಾಣಿ ಕಿ ವಾವ್‌’ (ರಾಣಿಯ ಸ್ನಾನ ಗೃಹ) ಚಿತ್ರ.
ನೋಟಿನ ಮುದ್ರಣ ವರ್ಷ. 
ಸ್ವಚ್ಛ ಭಾರತ ಲಾಂಛನ ಮತ್ತು ಘೋಷ ವಾಕ್ಯ. 
ನೋಟಿನ ಮೌಲ್ಯ ದಾಖಲಿಸಿರುವ ಭಾರತೀಯ ಭಾಷೆಗಳ ಪಟ್ಟಿ. 
ದೇವನಾಗರಿ ಲಿಪಿಯಲ್ಲಿ 100 ರೂ. ಎಂದು ಗುರುತು.
 

ವೈಶಿಷ್ಟ್ಯತೆ
ಆಕಾರದಲ್ಲಿ ಹಾಲಿ 100 ರೂ. ನೋಟಿಗಿಂತ ಕೊಂಚ ಕಿರಿದು. ಹೊಸ 10 ರೂ. ನೋಟಿಗಿಂತ ಕೊಂಚ ದೊಡ್ಡದು. 
ಹಾಲಿ 100 ರೂ. ನೋಟಿನ ಅಗಲಕ್ಕಿಂತ 15 ಮಿ.ಮೀ. ಹಾಗೂ ಎತ್ತರದಲ್ಲಿ 7 ಮಿ.ಮೀ. ಕಿರಿದು. 
ಅಲ್ಟ್ರಾವಯೋಲೆಟ್‌ ಕಿರಣಗಳಲ್ಲಿ ಮಾತ್ರ ಕಾಣಸಿಗುವ ಹಲವಾರು ಹೊಸ ಸೂಕ್ಷ್ಮ ಭದ್ರತಾ ವಿಶೇಷತೆಗಳು. 

Advertisement

Udayavani is now on Telegram. Click here to join our channel and stay updated with the latest news.

Next