ಸತ್ಯಕ್ಕೆ ದೂರವಾದ ಆಪಾದನೆಗಳನ್ನು ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ವ್ಯಂಗ್ಯವಾಡಿದರು.
Advertisement
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಯಣ್ಣ ಬ್ರಿಗೇಡ್ ಸ್ಥಾಪನೆಯಾದ ಮೇಲೆ ರಾಜ್ಯ ಬಿಜೆಪಿಯಲ್ಲಿ ಹಲವುಗುಂಪುಗಳಾಗಿವೆ. ಬಿಜೆಪಿಯ ಮಾತೃ ಸಂಸ್ಥೆಯಾದ ಸಂಘ ಪರಿವಾರದಲ್ಲಿ ಯಡಿಯೂರಪ್ಪ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ. ಬಿಜೆಪಿ ಮತ್ತು ಹೈಕಮಾಂಡ್ ಮತ್ತೂಮ್ಮೆ ಕಿಮ್ಮತ್ತು ಕೊಡಬಹುದೇನೋ ಎಂದು ಗೋಬೆಲ್ಸ್ ಥಿಯರಿ ಅನುಸರಿಸಿ, ಒಂದು ಸುಳ್ಳನ್ನು ನೂರು ಸಾರಿ ಹೇಳಿ ಸತ್ಯ ಮಾಡಲು ಡೈರಿ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ ಎಂದು ಟೀಕಿಸಿದರು. ಯಡಿಯೂರಪ್ಪಯಾವಾಗ ತೆರಿಗೆ ಅಧಿಕಾರಿಯಾದರು? ಯಾವಾಗ ಆದಾಯ ಇಲಾಖೆ ಬಿಜೆಪಿಯವರ ಸ್ವತ್ತಾಯಿತು? ಆದಾಯ ತೆರಿಗೆ ಇಲಾಖೆಯವರೇ ಇವರಿಗೆ ಡೈರಿ ಕೊಟ್ಟಿದ್ದಾರೆ ಎಂದರೆ ಅಧಿಕಾರ ದುರ್ಬಳಕೆಯಾಗಿದೆ ಎಂದರ್ಥ ಎಂದವರು ಹೇಳಿದರು.