Advertisement
ಭೋಪಾಲ್ ನ ಜೋಡಿಯೊಂದು ಜುಲೈ 29 ರಂದು ಮದುವೆಯಾಗಿದ್ದು ಆಗಸ್ಟ್ ೫ ರಂದು ಹನಿಮೂನ್ ಗೆಂದು ಜೈಪುರಕ್ಕೆ ಬಂದು ಚೌಮು ಪುಲಿಯಾ ಸಮೀಪದ ಹೋಟೆಲ್ ನಲ್ಲಿ ತಂಗಿದ್ದಾರೆ ಒಂದು ದಿನ ಜೈಪುರದ ಸುತ್ತಮುತ್ತಲಿನ ಎಲ್ಲ ಪ್ರದೇಶಗಳನ್ನು ಸುತ್ತಾಡಿದ ಜೋಡಿ ಮರುದಿನ ಜೈಪುರದ ರಿಂಗಾಸ್‍ನಲ್ಲಿರುವ ಬಾಬಾ ಖತುಶ್ಯಾಮ್ ಜಿ ದೇವಸ್ಥಾನಕ್ಕೆ ಭೇಟಿ ನೀಡುವ ಯೋಚನೆಯಲ್ಲಿದ್ದರು ಅದಕ್ಕಾಗಿ ಪತಿ ಕಾರು ಬುಕ್ ಮಾಡಲು ತೆರಳಿದ್ದಾನೆ ಕಾರು ಬುಕ್ ಮಾಡಿ ಹೋಟೆಲಿಗೆ ಬರುವಷ್ಟರಲ್ಲಿ ಪತ್ನಿ ರೂಮ್ ನಲ್ಲಿ ಇರಲಿಲ್ಲ,ಇಲ್ಲೇ ಎಲ್ಲೋ ಇರಬೇಕು ಎಂದು ಅತ್ತ ಇತ್ತ ಹುಡುಕಾಡಿದ್ದಾನೆ ಎಲ್ಲೂ ಪತ್ತೆಯಾಗಲಿಲ್ಲ, ಬಳಿಕ ಆಕೆಯ ಮೊಬೈಲ್ ಗೆ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸಲಿಲ್ಲ, ಬಳಿಕ ಹೋಟೆಲ್ ನವರ ಬಳಿ ಕೇಳಿದಾಗ ಅವರು ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಬಳಿಕ ಹೋಟೆಲ್ ನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪತ್ನಿ ತನ್ನ ಸೂಟ್ ಕೇಸ್ ಹಿಡಿದುಕೊಂಡು ಹೋಟೆಲ್ ನಿಂದ ಹೊರ ಹೋಗಿರುವುದು ಕಂಡು ಬಂದಿದೆ.
Advertisement
bizarre:ಅದೇನಾಯ್ತೋ..ಹನಿಮೂನ್‌ಗೆಂದು ಬಂದು ಪತಿಯನ್ನೇ ಹೋಟೆಲ್ ನಲ್ಲಿ ಬಿಟ್ಟು ಹೋದ ಪತ್ನಿ!
02:27 PM Aug 10, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.