ಲಕ್ನೋ: ಮದುವೆಯಾದ ರಾತ್ರಿಯೇ ನವದಂಪತಿಗಳು ಹೃದಯಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ.
ಪ್ರತಾಪ್ ಯಾದವ್(22), ಪುಷ್ಪಾ (20) ಮೃತ ದಂಪತಿ.
ಮೇ. 30 ರಂದು ಇಬ್ಬರ ಮದುವೆ ನಡೆದಿದ್ದು, ಮದುವೆಯಾದ ರಾತ್ರಿ ನವಜೋಡಿ ತನ್ನ ಕೋಣೆಗೆ ಹೋಗಿದ್ದಾರೆ. ಮರುದಿನ ಬೆಳಗ್ಗೆ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಆಟ ಇನ್ನು ನಡೆಯದು..: ಸಚಿವ ಎಂ.ಬಿ ಪಾಟೀಲ್
Related Articles
ಪೊಲೀಸರು ಬಂದು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದು,ಪೋಸ್ಟ್ ಮಾರ್ಟಂ ವರದಿಯಲ್ಲಿ ಇಬ್ಬರ ಮೃತ್ಯು ಹೃದಯಾಘಾತದಿಂದ ಸಂಭವಿಸಿದೆ ಎಂದು ತಿಳಿದು ಬಂದಿದೆ.
ನವದಂಪತಿಗಳಾದ ಪ್ರತಾಪ್ ಮತ್ತು ಪುಷ್ಪಾ ಅವರ ಅಂತ್ಯಕ್ರಿಯೆಯನ್ನು ಪ್ರತಾಪ್ ಅವರ ಗ್ರಾಮದಲ್ಲಿ ಅಪಾರ ಜನಸ್ತೋಮದ ನಡುವೆ ಒಂದೇ ಚಿತಾಗಾರದಲ್ಲಿ ನೆರವೇರಿಸಲಾಯಿತು.