Advertisement

ಬ್ಲಾಂಕ್‌ ಆಗಿ ಬಂದ ಹೊಸಬರು

10:13 AM Dec 28, 2019 | mahesh |

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾಗಳು ಬಂದಿವೆ. ಅದರಲ್ಲೂ ಡ್ರಗ್ಸ್‌ ಕುರಿತ ಕಥೆ ಹೊಂದಿರುವ ಸಿನಿಮಾಗಳಿಗೂ ಲೆಕ್ಕವಿಲ್ಲ. ಆ ಸಾಲಿಗೆ ಈಗ “ಬ್ಲಾಂಕ್‌’ ಚಿತ್ರ ಸೇರಿದೆ. ಬೆರಳೆಣಿಕೆ ಕಲಾವಿದರನ್ನು ಹೊರತುಪಡಿಸಿದರೆ ಹೊಸಬರೇ ಸೇರಿ ಮಾಡಿರುವ ಚಿತ್ರವಿದು. ಈ ಚಿತ್ರದ ಮೂಲಕ ಎಸ್‌.ಜಯ್‌ ನಿರ್ದೇಶಕರಾಗಿದ್ದಾರೆ. ಎಂಜಿನಿಯರಿಂಗ್‌ ಓದಿದ ಬಳಿಕ, ಬೇರೆ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳದ ಜಯ್‌, ಸಿನಿಮಾದತ್ತ ವಾಲಿದವರು. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ಒಳ್ಳೆಯ ತಂಡ ಕಟ್ಟಿಕೊಂಡು “ಬ್ಲಾಂಕ್‌’ ಚಿತ್ರ ಮಾಡಿದ್ದಾರೆ. ಇತ್ತೀಚೆಗೆ ತಮ್ಮ ಸಿನಿಮಾ ಕುರಿತು ಹೇಳಲೆಂದು ತಂಡದೊಂದಿಗೆ ಬಂದಿದ್ದರು. ಮೊದಲು ಮಾತಿಗಿಳಿದ ಜಯ್‌, “ನಾನು ಬಿಇ ಮುಗಿಸಿದ ಬಳಿಕ ಸಿನಿಮಾ ಮಾಡಬೇಕೆಂಬ ಆಸೆ ಹೆಚ್ಚಾಯ್ತು. ಒಂದು ಕಥೆ ಸಿದ್ಧಪಡಿಸಿಕೊಂಡು, ಗೆಳೆಯರ ಜೊತೆ ಚರ್ಚಿಸಿ ಈ ಚಿತ್ರಕ್ಕೆ ಕೈ ಹಾಕಿದೆ. ನನ್ನ ಈ ಸಿನಿಮಾ ಕನಸು ನಿರ್ಮಾಪಕರಿಂದ ನನಸಾಗಿದೆ. ಇದು ಕನಸು ಮತ್ತು ವಾಸ್ತವ ನಡುವಿನ ಕಥೆ. ಕನ್ನಡದಲ್ಲಿ ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರಗಳು ಬಂದಿವೆಯಾದರೂ, ಇಲ್ಲಿ ಹೊಸ ಬಗೆಯ ನಿರೂಪಣೆ ಇದೆ. ಡಗ್ಸ್ ಕುರಿತಾದ ಹೊಸ ವಿಷಯಗಳು ಇಲ್ಲಿವೆ. ಜೊತೆಗೊಂದು ಸಂದೇಶವೂ ಇದೆ. ಇಲ್ಲಿ ಲವ್‌, ನೆಗೆಟಿವ್‌ ಶೇಡ್‌, ಹಾರರ್‌, ಥ್ರಿಲ್ಲರ್‌ ಹೀಗೆ ಎಲ್ಲಾ ಅಂಶಗಳೂ ಇವೆ. ಮೈಸೂರು, ಕಡೂರು, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀ­ಕರಣ ನಡೆಸ­ಲಾಗಿದೆ. ಟೀಸರ್‌ ನೋಡಿದವರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾಗೂ ಒಳ್ಳೆಯ ಮೆಚ್ಚುಗೆ ಸಿಗುತ್ತದೆ ಎಂಬ ವಿಶ್ವಾಸ ನನ್ನದು’ ಎಂದರು ಜಯ್‌.

Advertisement

ನಿರ್ಮಾಪಕ ಮಂಜುನಾಥ್‌ ಪ್ರಸನ್ನ ಅವರಿಗೆ ಇದು ಮೊದಲ ಚಿತ್ರ. ಮೂಲತಃ ಶಿಕ್ಷಣ ತಜ್ಞರು, ಕೃಷಿಕರು ಆಗಿರುವ ಅವರಿಗೆ, ಪ್ರತಿಭಾವಂತರಿಗೊಂದು ವೇದಿಕೆ ಕಲ್ಪಿಸಿಕೊಡಬೇಕೆಂಬ ಆಸೆ ಇತ್ತು. ಅದು “ಬ್ಲಾಂಕ್‌’ ತಂಡದ ಮೂಲಕ ಈಡೇರಿದೆ. ಇಲ್ಲಿ ಎಲ್ಲರ ಪರಿಶ್ರಮ­ದಿಂದ ಒಳ್ಳೆಯ ಸಿನಿಮಾ ರೂಪಗೊಂಡಿದೆ. ಹೊಸಬರಲ್ಲಿ ಹೊಸ ಆಲೋಚನೆ ಇದೆ ಎಂಬುದಕ್ಕೆ ಈ ಚಿತ್ರ ಸಾಕ್ಷಿಯಾಗುತ್ತೆ. ಮುಂದಿನ ದಿನಗಳಲ್ಲಿ ಸದಭಿರುಚಿಯ ಚಿತ್ರ ಕೊಡಬೇಕೆಂಬ ಉದ್ದೇಶವಿದೆ’ ಎಂದರು ಮಂಜುನಾಥ್‌ ಪ್ರಸನ್ನ.

“ಬ್ಲಾಂಕ್‌’ ಚಿತ್ರದ ಮೂಲಕ ಭರತ್‌ ನಾಯಕರಾಗಿದ್ದಾರೆ. ಸಿನಿಮಾ ಕನಸು ಹೊತ್ತಿದ್ದ ಭರತ್‌, ಹಾಸನದಿಂದ ಬೆಂಗಳೂರಿಗೆ ಬಂದವರೇ, ನಾಲ್ಕು ವರ್ಷ ಕೆಲ ಚಿತ್ರಗಳಲ್ಲಿ ನಿರ್ದೇಶನದ ವಿಭಾಗದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದರಂತೆ. ಕೊನೆಗೆ ಹೀರೋ ಆಗಬೇಕು ಎಂಬ ಆಸೆ ಹುಟ್ಟಿದ್ದರಿಂದ ಅದಕ್ಕೆ ಸಾಕಷ್ಟು ಶ್ರಮಿಸಿದ್ದೂ ಇದೆ. ಮೊದ ಮೊದಲು ಕ್ರೌಡ್‌ಫ‌ಂಡಿಂಗ್‌ ಮೂಲಕ ಸಿನಿಮಾ ಶುರು ಮಾಡಿದ ಅವರಿಗೆ ಮಂಜುನಾಥ್‌ ಪ್ರಸನ್ನ ಅವರು ಸಾಥ್‌ ನೀಡಿದ್ದರಿಂದ ಚಿತ್ರ ಇಲ್ಲಿಯವರೆಗೆ ಬಂದು ನಿಂತಿದೆಯಂತೆ. ಆ ಬಗ್ಗೆ ಹೇಳುವ ಭರತ್‌, ನನಗೆ ಎಲ್ಲಾ ಟೆಕ್ನೀಷಿಯನ್ಸ್‌ ದೇವರಿದ್ದಂತೆ. ಅವರ ಸಹಕಾರ, ಪ್ರೋತ್ಸಾಹ ಇರದಿದ್ದರೆ, ನಾನು ಹೀರೋ ಆಗುತ್ತಿರಲಿಲ್ಲ. ಈ ಚಿತ್ರವೂ ಶುರುವಾಗುತ್ತಿರಲಿಲ್ಲ ಅಂತ’ ಭಾವುಕರಾದರು ಭರತ್‌.

ನಾಯಕಿ ಕೃಷಿ ತಪಂಡ ಅವರಿಗೆ ಹೊಸಬರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆಯಂತೆ. ಅವರಿಗಿಲ್ಲಿ ಮೂರು ಶೇಡ್‌ ಪಾತ್ರವಿದೆಯಂತೆ. ಡ್ರಗ್ಸ್‌ ತೆಗೆದುಕೊಂಡವರ ದೃಷ್ಟಿಯಲ್ಲಿ ಏನೆಲ್ಲಾ ಆಗುತ್ತೆ ಎಂಬುದರ ಚಿತ್ರಣ ಇಲ್ಲಿದೆ. ಕನಸು ಹಾಗು ವಾಸ್ತವ ಅಂಶಗಳು ಚಿತ್ರದ ಹೈಲೈಟ್‌’ ಅಂದರು ಕೃಷಿ ತಪಂಡ.

ಚಿತ್ರದ ಟೀಸರ್‌ಗೆ ಅಂದು “ಗರುಡ’ ಖ್ಯಾತಿಯ ರಾಮ್‌ ಚಾಲನೆ ಕೊಟ್ಟರು. ಚಿತ್ರದ ಟೀಸರ್‌ಗೆ ಹಿನ್ನೆಲೆ ಧ್ವನಿಯನ್ನೂ ನೀಡಿರುವ ಅವರು, ಅಂದು ಚಿತ್ರತಂಡಕ್ಕೆ ಶುಭಕೋರಿದರು. ಚಿತ್ರದಲ್ಲಿ ನಟಿಸಿರುವ ಪೂರ್ಣಚಂದ್ರ ಮೈಸೂರು, ರಶ್‌ ಮಲ್ಲಿಕ್‌,ತೀರ್ಥ ಇತರರು ಇದ್ದರು. ಚಿತ್ರಕ್ಕೆ ಶ್ರೀ ಶಾಸ್ತ ಸಂಗೀತವಿದೆ. ಪುರುಷೋತ್ತಮ್‌ ಛಾಯಾಗ್ರಹಣವಿದೆ.

Advertisement

ವಿಭ

Advertisement

Udayavani is now on Telegram. Click here to join our channel and stay updated with the latest news.

Next