Advertisement

ನೈಜ ಘಟನೆಯ ಸುತ್ತ ಹೊಸಬರು

12:36 PM May 02, 2018 | |

ನೈಜ ಘಟನೆ ಆಧಾರಿತ … ಹೀಗೆ ಹೇಳಿಕೊಂಡು ಅದೆಷ್ಟು ಸಿನಿಮಾಗಳು ಸೆಟ್ಟೇರುತ್ತವೋ ಲೆಕ್ಕವಿಲ್ಲ. ನೈಜ ಘಟನೆ ಎಂದಾಗ ಸಿನಿಮಾ ಬಗ್ಗೆ ಕುತೂಹಲ ಹೆಚ್ಚುತ್ತದೆ ಎಂಬ ಕಾರಣಕ್ಕೆ ಎಲ್ಲೋ ನಡೆದ ಘಟನೆಗೆ ಸಿನಿಮೀಯ ಸ್ಪರ್ಶ ಕೊಟ್ಟು ತೆರೆಗೆ ತರುತ್ತಾರೆ. ಈಗ ಹೊಸಬರ ತಂಡವೊಂದು ಕೂಡಾ ನೈಜ ಘಟನೆಯೊಂದನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿದೆ.

Advertisement

ಚಿತ್ರಕ್ಕೆ ಟೈಟಲ್‌ ಇನ್ನಷ್ಟೇ ಅಂತಿಮವಾಗಬೇಕಿದೆ. ಇತ್ತೀಚೆಗೆ ಚಿತ್ರಕ್ಕೆ ನಟ ಮಯೂರ್‌ ಕ್ಲಾಪ್‌ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದೆಯಂತೆ. 1990ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಔಷಧಿ ದಂಧೆಯನ್ನಿಟ್ಟುಕೊಂಡು ಚಿತ್ರ ಮಾಡಲಾಗುತ್ತಿದೆ. ಐವರು ಯುವಕರು ಸಾಧನೆ ಮಾಡುವ ಸಲುವಾಗಿ  ಹುರಪಿನಿಂದ ಈ ದಂಧೆಗೆ ಅರಿವಿಲ್ಲದೆ ಸೇರಿಕೊಳ್ಳುತ್ತಾರೆ.

ಅದರಿಂದ ತಪ್ಪಿಸಿಕೊಂಡು ಹೇಗೆ ಹೊರಗೆ ಬರುತ್ತಾರೆ ಎಂಬುದನ್ನು ಸಿನಿಮಾದನ್ನು ಚಿತ್ರದಲ್ಲಿ ತೋರಿಸಲಿದ್ದಾರಂತೆ. ಚಿತ್ರವನ್ನು ಶ್ರೀವತ್ಸ ಆರ್‌ ಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಥರ್ವ್‌, ವರುಣ್‌ ನಾರಾಯಣ್‌, ವಿನಯ್‌ ರಾವ್‌, ಸಚಿನ್‌ ಇವರೊಂದಿಗೆ ಮಾಸ್ಟರ್‌ ಗೋಕುಲ್‌ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದಲ್ಲಿನ ಪೊಲೀಸ್‌ ಅಧಿಕಾರಿ ಪಾತ್ರಕ್ಕೆ ಸೂಕ್ತ ಕಲಾವಿದರನ್ನು ಆಯ್ಕೆ ಮಾಡಲು ಚಿತ್ರತಂಡ ಚಿಂತನೆ ನಡೆಸುತ್ತಿದೆ.

ಚಿತ್ರದ ಎರಡು ಹಾಡುಗಳಿಗೆ  ಮಹಾರಾಜ್‌ ಸಂಗೀತ, ಪೂರ್ಣಚಂದ್ರ ಬೈಕಾಡಿ ಛಾಯಾಗ್ರಹಣ ಚಿತ್ರಕ್ಕಿದೆ. ಬೆಂಗಳೂರು ಮತ್ತು ಚಿಕ್ಕಮಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ. ಆರ್‌.ಜೆ.ಸಿನಿ ಕ್ರಿಯೇಷನ್ಸ್‌ ಮೂಲಕ ಜಯಶ್ರೀ ಮತ್ತು ಸಾವಿತ್ರಮ್ಮ ನಿರ್ಮಾಣ ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next