Advertisement

ಉತ್ತರ ಪ್ರದೇಶ : ಕಸದ ರಾಶಿಯಲ್ಲಿ ಮಗುವಿನ ಮೃತ ದೇಹ ಪತ್ತೆ

12:15 PM Jan 02, 2018 | udayavani editorial |

ಮುಜಫ‌ರನಗರ : ಜಿಲ್ಲೆಯ ಪುರ್ಕಾಜಿ ಪಟ್ಟಣದಲ್ಲಿ  ಕಸದ ರಾಶಿಯೊಂದರಲ್ಲಿ ನವಜಾತ ಹೆಣ್ಣು ಶಿಶುವಿನ ಮೃತ ದೇಹವೊಂದು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಹೆತ್ತವರಿಂದ ತ್ಯಜಿಸಲ್ಪಟ್ಟಿದ್ದ ಈ ಮಗು ತೀವ್ರವಾದ ಚಳಿಯಿಂದಾಗಿ ಮೃತಪಟ್ಟಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. 

ಎಸ್‌ಎಚ್‌ಓ ಕುಲದೀಪ್‌ ಸಿಂಗ್‌ ಅವರು ಈ ಬಗ್ಗೆ ಕೇಸು ದಾಖಲಿಸಿಕೊಂಡು ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆ.318ರ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ. ಮೃತ ಮಗುವಿನ ದೇಹವು ಪ್ಲಾಸ್ಟಿಕ್‌ ಪೊಟ್ಟಣದಲ್ಲಿ ಕಟ್ಟಿರುವುದು ಕಂಡು ಬಂದಿತ್ತು. ಅದನ್ನೀಗ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಿಂಗ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next