Advertisement

ವೆಂಟಿಲೇಟರ್ ಸಮಸ್ಯೆ; ನವಜಾತ ಶಿಶು ಸಾವು-ಸಂಬಂಧಿಕರ ಆಕ್ರೋಶ, ನರ್ಸ್ ಒತ್ತೆಯಾಳು!

03:59 PM Sep 18, 2020 | Nagendra Trasi |

ನವದೆಹಲಿ: ನವಜಾತ ಶಿಶುವಿಗೆ ವೆಂಟಿಲೇಟರ್ ವ್ಯವಸ್ಥೆ ಸಿಗದ ಹಿನ್ನೆಲೆಯಲ್ಲಿ ಅಕಾಲಿಕವಾಗಿ ಸಾವನ್ನಪ್ಪಿರುವ ಘಟನೆ ದೆಹಲಿಯ ಮಾಳವೀಯಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ವೆಂಟಿಲೇಟರ್ ಸಿಗದೆ ಮಗು ಸಾವನ್ನಪ್ಪಿರುವ ಸುದ್ದಿ ಕೇಳಿದ ಸಂಬಂಧಿಕರು ಆಸ್ಪತ್ರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಆಸ್ಪತ್ರೆಯ ವೈದ್ಯಾಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ದೂರಿದ್ದು, ನರ್ಸ್ ಅನ್ನು ಒತ್ತೆಯಾಳನ್ನಾಗಿ ಇಟ್ಟುಕೊಂಡಿರುವುದಾಗಿ ವರದಿ ವಿವರಿಸಿದೆ.

ಗುರುವಾರ ರಾತ್ರಿ 9ಗಂಟೆಗೆ ಪಂಡಿತ್ ಮದನ್ ಮೋಹನ್ ಮಾಳವೀಯಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದ ನಂತರ ಸುಮಾರು ಮೂರು ಗಂಟೆಗಳ ಕಾಲ ಒತ್ತೆಯಾಳಾಗಿದ್ದ ನರ್ಸ್ ಅನ್ನು ಬಿಡುಗಡೆ ಮಾಡಿರುವುದಾಗಿ ವರದಿ ತಿಳಿಸಿದೆ.

ವರದಿಯ ಪ್ರಕಾರ,ಆಸ್ಪತ್ರೆಯ ವೈದ್ಯಾಧಿಕಾರಿಗಳು ಎಷ್ಟೇ ಮನವಿ ಮಾಡಿಕೊಂಡರು ಕೂಡಾ ಮಗುವಿನ ಕುಟುಂಬದ ಸದಸ್ಯರು ನರ್ಸ್ ಅನ್ನು ಬಿಡುಗಡೆ ಮಾಡಲು ಸಿದ್ಧರಾಗಿಲ್ಲವಾಗಿತ್ತು. ನಂತರ ಪೊಲೀಸರು ಘಟನಾ ಸ್ಥಳಕ್ಕೆ ಬಂದ ನಂತರ ನರ್ಸ್ ಅನ್ನು ಬಿಡುಗಡೆ ಮಾಡಿರುವುದಾಗಿ ವರದಿ ವಿವರಿಸಿದೆ.

ಇದನ್ನೂ ಓದಿ: 24 ಗಂಟೆಯೊಳಗೆ21 ಮಿಲಿಯನ್ ವೀಕ್ಷಣೆ ಪಡೆದ ಅಕ್ಷಯ್ ಕುಮಾರ್ “ಲಕ್ಷ್ಮೀ ಬಾಂಬ್ ಮೋಷನ್ ಪಿಚ್ಚರ್”

Advertisement

ಮಗು ಜನಿಸಿದ್ದ ವೇಳೆ ಒಂದು ಕೇಜಿ ತೂಕ ಹೊಂದಿದ್ದು, ಈ ಸಂದರ್ಭದಲ್ಲಿ ವೆಂಟಿಲೇಷನ್ ಅಗತ್ಯವಿತ್ತು. ಏತನ್ಮಧ್ಯೆ ನಾವು ತಾಯಿ ಮತ್ತು ಮಗುವನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವು. ಆದರೆ ಅಲ್ಲಿಯೂ ವೆಂಟಿಲೇಷನ್ ಇಲ್ಲವಾಗಿತ್ತು. ಈ ವೇಳೆ ಮಗು ಸಾವನ್ನಪ್ಪಿತ್ತು. ಆಗ ನಮ್ಮ ಆಸ್ಪತ್ರೆಯಿಂದ ಡಾ.ಆಶೀಶ್ ಮತ್ತು ನರ್ಸ್ ಅನುರಾಧಾ ಅವರನ್ನು ಅಲ್ಲಿಗೆ ಕಳುಹಿಸಿದ್ದೇವು. ಅಲ್ಲಿ ಡಾ.ಆಶೀಶ್ ಅವರನ್ನು ಹೊಡೆಯಲು ಆರಂಭಿಸಿದಾಗ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದರು. ಆದರೆ ನರ್ಸ್ ಅನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದರು ಎಂದು ಪಂಡಿತ್ ಮದನ್ ಮೋಹನ್ ಮಾಳವೀಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಮಾಧವ್ ಅವರು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next