Advertisement

ತಂದೆಯಿಂದಲೂ ಮಗುವಿಗೆ ಎಚ್‌ಐವಿ!

06:00 AM Sep 29, 2018 | Team Udayavani |

ಲಂಡನ್‌: ಅಪರೂಪದ ಪ್ರಕರಣವೊಂದರಲ್ಲಿ ತಂದೆಯಿಂದಲೂ ಮಗುವಿಗೆ ಎಚ್‌ಐವಿ ಸೋಂಕು ತಗುಲಿರುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ. 2009ರಲ್ಲಿ ಜನಿಸಿದ್ದ ಮಗುವಿನ ತಾಯಿಗೆ ಎಚ್‌ಐವಿ ಇರಲಿಲ್ಲ. ಆದರೆ ತಂದೆ ಎಚ್‌ಐವಿ ಹೊಂದಿದ್ದರು. ಮಗು ಜನಿಸಿದ ವೇಳೆ ತಂದೆಗೆ ಸಿಡುಬು ಕಾಣಿಸಿಕೊಂಡಿತ್ತು. ಸಿಡುಬಿನಿಂದ ಉಂಟಾದ ಗುಳ್ಳೆಗಳಿಂದ ಸ್ರವಿಸಿದ ದ್ರವಾಂಶದ ಮೂಲಕ ಮಗುವಿಗೆ ಎಚ್‌ಐವಿ ಸೋಂಕು ಹರಡಿದೆ ಎಂದು ಪೋರ್ಚುಗಲ್‌ನ ಲಿಸºನ್‌ ವಿಶ್ವವಿದ್ಯಾಲಯದ ಸಂಶೋಧಕರು ನಿರ್ಧರಿಸಿದ್ದಾರೆ.

Advertisement

ಸಿಡುಬು ಉಂಟಾದಾಗ ವೈರಸ್‌ ಉತ್ಪಾದನೆ ಅಧಿಕವಾಗಿರುತ್ತದೆ. ಹೀಗಾಗಿ ಸೋಂಕು ಮಗುವಿನ ಆರಂಭದ ದಿನಗಳಲ್ಲೇ ಹರಡಿದೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ. ಎಚ್‌ಐವಿ ಇರುವುದು 2013ರ ಜನವರಿಯಲ್ಲಿ ಪತ್ತೆಯಾಗಿತ್ತು. ಮಗು ಜನಿಸಿದ ವೇಳೆ ಮತ್ತು ನಾಲ್ಕು ವರ್ಷಗಳ ನಂತರದ ವೈದ್ಯಕೀಯ ಅಧ್ಯಯನ ಹಾಗೂ ಇತರ ಅಂಶಗಳ ಅಧ್ಯಯನ ನಡೆಸಿ ವಿಶ್ವವಿದ್ಯಾಲಯದ ಸಂಶೋಧಕರು ಈ ನಿರ್ಧಾರಕ್ಕೆ ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next