Advertisement

ಹೊಸಬೆಟ್ಟು: ಶ್ರೀ ಗುರುರಾಘವೇಂದ್ರ ಮಠದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ

09:44 PM Apr 08, 2019 | Sriram |

ಸುರತ್ಕಲ್‌: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಹೊಸಬೆಟ್ಟು ಇಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮವು ಮೇ 19ರಿಂದ 26ರ ವರೆಗೆ ಜರಗಲಿದ್ದು, ಇದೀಗ ಶ್ರೀ ಗುರುಗಳ ಸನ್ನಿಧಾನದಲ್ಲಿ ರಾಜಗೋಪುರದ ಕಾಮಗಾರಿ,ಬ್ರಹ್ಮಕಲಶೋತ್ಸವಕ್ಕೆ ಬೇಕಾದ ಸಿದ್ಧತೆ ಭರದಿಂದ ಜರಗುತ್ತಿದೆ.

Advertisement

ಮೇ 19ರಿಂದಲೇ ಇಲ್ಲಿ ವೇ| ಮೂ| ಚಿತ್ರಾಪುರ ಕಗ್ಗಿ ಗೋಪಾಲಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಪ್ರತೀ ದಿನ ಹೋಮ, ಹವನ, ನವಕ ಕಲಶಾಭಿ ಷೇಕ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೇ 26ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಲಿದೆ.

ಗುರುಗಳ ಸನ್ನಿಧಾನದ ಅನತಿ ದೂರದಲ್ಲಿ ಪಾಕ ಶಾಲೆ, ಉಗ್ರಾಣ ಧಾರ್ಮಿಕ ಸಭೆಗೆ ವೇದಿಕೆ ನಿರ್ಮಾಣ ಪ್ರಗತಿಯಲ್ಲಿದೆ. ಸುಮಾರು ಇಪ್ಪತ್ತೈದು ಸಾವಿರ ಭಕ್ತರು ಬಂದರೂ ತೊಂದರೆ ಆಗದಂತೆ ನಿರ್ವ ಹಿಸಲು ಇದೀಗ ಭೂಮಿ ಯನ್ನು ಜೇಸಿಬಿ ಮೂಲಕ ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ.

ಸುಮಾರು ಐನೂರರಿಂದ ಎಂಟು ನೂರು ವಾಹನಗಳು ನಿಲ್ಲಲು ಸುಸಜ್ಜಿತ ಪಾರ್ಕಿಂಗ್‌ ಕೆಲಸ ನಡೆಯುತ್ತಿದೆ. ಮೇ 15ರ ಬಳಿಕ ಮಳೆಗಾಲವು ಸಮೀಪಿಸುವುದರಿಂದ ಬ್ರಹ್ಮಕಲಶೋತ್ಸವ ಸಮಿತಿಯು ಎಲ್ಲ ಭಾಗಗಳಲ್ಲಿ ತಗಡು ಶೀಟುಗಳ ಚಪ್ಪರ ಅಳವಡಿಸಲು ನಿರ್ಧರಿಸಿದೆ. ಮೇ 9ರಂದು ರಾಜಗೋಪುರದ ಉದ್ಘಾಟ ನೆಯನ್ನು ಪುತ್ತಿಗೆ ಸುಗುಣೇಂದ್ರ ತೀರ್ಥರು ಉದ್ಘಾಟಿಸಲಿದ್ದಾರೆ.

ಹರಿದಾಸ ರತ್ನ ವಾದೀಶಾಚಾರ್ಯರು ತಮ್ಮ ಕನಸಿನಲ್ಲಿ ಗುರುಗಳು ಬಂದು ಹೇಳಿದ ಆಶಯದಂತೆ 1997ರಲ್ಲಿ ಸ್ಥಾಪನೆಗೊಂಡಿದೆ. ಬ್ರಹ್ಮಕಲಶೋತ್ಸವ ಸಮಿತಿಯು, ಮಠದ ಆಡಳಿತ ಮಂಡ ಳಿಯು ಹಗಲಿರುಳು ಭರದ ಸಿದ್ಧತೆಯಲ್ಲಿ ತೊಡಗಿ ಕೊಂಡಿದೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.

Advertisement

ಸಿದ್ಧತೆ ಶೀಘ್ರ ಪೂರ್ಣ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಿದ್ಧತೆ ಸಮಿತಿ ಸಂಚಾಲಕ ಪುಂಡಲೀಕ ಹೊಸಬೆಟ್ಟು ಮಾಹಿತಿ ನೀಡಿ, ಭಕ್ತರ ಅನುಕೂಲಕ್ಕಾಗಿ ನಾಲ್ಕೈದು ಎಕ್ರೆ ಪ್ರದೇಶದಲ್ಲಿ ಅನ್ನಛತ್ರ, ಉಗ್ರಾಣ, ಪಾರ್ಕಿಂಗ್‌ ವ್ಯವಸ್ಥೆ ಮಾಡುದ್ದೇವೆ. ಒಂದೂ ವರೆ ಎಕ್ರೆ ಪ್ರದೇಶ ದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಭೂಮಿ ಸಮತಟ್ಟು ಕಾರ್ಯ ನಡೆಯುತ್ತಿದೆ. ಸಮಿತಿಯ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಮಠದ ಆನುವಂಶಿಕ ಆಡಳಿತ ಮೊಕ್ತೇ ಸರ ರಾಘವೇಂದ್ರ ಎಚ್‌.ವಿ. ಅವರು, ಬ್ರಹ್ಮಕಲಶೋತ್ಸವಕ್ಕೆ ಭಕ್ತರು ಸಹಕರಿಸಿ ಶ್ರೀ ಗುರುಗಳ ಸನ್ನಿಧಾನಕ್ಕೆ ಬಂದು ಯಶಸ್ವಿಗೊಳಿಸುವಂತೆ ವಿನಂತಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವೇಶ್ವರ ಬದವಿದೆ, ಕಾರ್ಯಾಧ್ಯಕ್ಷ ಪಿ.ಎಚ್‌. ಆನಂದ್‌, ಹರಿಕೃಷ್ಣ ಸಾಲ್ಯಾನ್‌, ಶ್ರೀನಿವಾಸ್‌ ಕುಳಾಯಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next