Advertisement

New Zealand vs Australia: 1ನೇ ಟೆಸ್ಟ್‌; ಕಿವೀಸ್‌ ಎದುರು ಗ್ರೀನ್‌ ಶತಕ

09:20 PM Feb 29, 2024 | Team Udayavani |

ವೆಲ್ಟಿಂಗ್ಟನ್‌: ಕ್ಯಾಮೆರಾನ್‌ ಗ್ರೀನ್‌ ಅವರ ಅಜೇಯ ಶತಕದ ಸಾಧನೆಯಿಂದ ಪ್ರವಾಸಿ ಆಸ್ಟ್ರೇಲಿಯ ತಂಡವು ನ್ಯೂಜಿಲ್ಯಾಂಡ್‌ ತಂಡೆದುರಿನ ಪ್ರಥಮ ಟೆಸ್ಟ್‌ ಪಂದ್ಯದ ಮೊದಲ ದಿನ 9 ವಿಕೆಟಿಗೆ 279 ರನ್ನುಗಳ ಸಾಧಾರಣ ಮೊತ್ತ  ಪೇರಿಸಿದೆ.

Advertisement

ಮ್ಯಾಟ್‌ ಹೆನ್ರಿ ಸಹಿತ ನ್ಯೂಜಿಲೆಂಡಿನ ಬಿಗುದಾಳಿಯೆದುರು ರನ್‌ ಗಳಿಸಲು ಪರದಾಡಿದ ಆಸ್ಟ್ರೇಲಿಯದ ಆಟಗಾರರು ನಿಧಾನವಾಗಿ ಎಚ್ಚರಿಕೆಯಿಂದ ಆಡಿದರು. ಆಗಾಗ್ಗೆ ವಿಕೆಟ್‌ ಕಳೆದುಕೊಂಡಿದ್ದರಿಂದ ತಂಡ ಒತ್ತಡಕ್ಕೂ ಬಿತ್ತು. ಆರಂಭಿಕರ ಬಳಿಕ ಗ್ರೀನ್‌ ಮತ್ತು ಮಿಚೆಲ್‌ ಮಾರ್ಷ್‌ ಅವರ ಉತ್ತಮ ಆಟದಿಂದಾಗಿ ಆಸ್ಟ್ರೇಲಿಯ ಸಾಧಾರಣ ಮೊತ್ತ ಪೇರಿಸಲು ಯಶಸ್ವಿಯಾಯಿತು.

ಇನಿಂಗ್ಸ್‌ ಆರಂಭಿಸಿದ ಉಸ್ಮಾನ್‌ ಖವಾಜ ಮತ್ತು ಸ್ಟೀವನ್‌ ಸ್ಮಿತ್‌ ಅವರು ಮೊದಲ ವಿಕೆಟಿಗೆ 61 ರನ್‌ ಪೇರಿಸಿದರು. ಆಬಳಿಕ ಕುಸಿದ ಆಸ್ಟ್ರೇಲಿಯ 89 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ಹಂತದಲ್ಲಿ ಗ್ರೀನ್‌ ಅವರನ್ನು ಸೇರಿಕೊಂಡ ಮಿಚೆ‌ಲ್‌ ಮಾರ್ಷ್‌ ಐದನೇ ವಿಕೆಟಿಗೆ 67 ರನ್ನುಗಳ ಜತೆಯಾಟ ನಡೆಸಿದರು. ಮಾರ್ಷ್‌ 40 ರನ್ನಿಗೆ ಔಟಾದರೆ ಗ್ರೀನ್‌ 103 ರನ್‌ ಗಳಿಸಿ ಅಜೇಯರಾಗಿ ಉಳಿದರು. 155 ಎಸೆತ ಎದುರಿಸಿದ ಅವರು 16 ಬೌಂಡರಿ ಬಾರಿಸಿದ್ದರು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌: 9 ವಿಕೆಟಿಗೆ 279 (ಸ್ಟೀವನ್‌ ಸ್ಮಿತ್‌ 31, ಉಸ್ಮಾನ್‌ ಖ್ವಾಜಾ 33, ಕ್ಯಾಮರೂನ್‌ ಗ್ರೀನ್‌ 103 ಔಟಾಗದೆ, ಮಿಚೆಲ್‌ ಮಾರ್ಷ್‌ 40, ಮ್ಯಾಟ್‌ ಹೆನ್ರಿ 43ಕ್ಕೆ 4).

Advertisement

Udayavani is now on Telegram. Click here to join our channel and stay updated with the latest news.

Next