Advertisement

ಪರಾಜಿತ ಟೆಸ್ಟ್‌ ತಂಡವನ್ನೇ ಉಳಿಸಿಕೊಂಡ ನ್ಯೂಜಿಲ್ಯಾಂಡ್‌

03:45 AM Mar 21, 2017 | Team Udayavani |

ಹ್ಯಾಮಿಲ್ಟನ್‌: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ 3ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯಕ್ಕಾಗಿ ನ್ಯೂಜಿಲ್ಯಾಂಡ್‌ ಪರಾಜಿತ ತಂಡದ ಮೇಲೆಯೇ ವಿಶ್ವಾಸವಿರಿಸಿದೆ.

Advertisement

ವೆಲ್ಲಿಂಗ್ಟನ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್‌ ಪಂದ್ಯವನ್ನು ನ್ಯೂಜಿಲ್ಯಾಂಡ್‌ ಮೂರೇ ದಿನಗಳಲ್ಲಿ 8 ವಿಕೆಟ್‌ ಅಂತರದಿಂದ ಸೋತಿತ್ತು. ಸರಣಿಯನ್ನು ಸಮಬಲಕ್ಕೆ ತರಬೇಕಾದರೆ ಅಂತಿಮ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡ ಎದುರಾಗಿದೆ.”ನಮಗೆ ಈ ತಂಡದ ಮೇಲೆ ನೂರಕ್ಕೆ ನೂರರಷ್ಟು ವಿಶ್ವಾಸವಿದೆ. ಇದು ದೇಶದ ಆತ್ಯುತ್ತಮ ಟೆಸ್ಟ್‌ ಕ್ರಿಕೆಟಿಗರ ತಂಡವಾಗಿದೆ. ಹ್ಯಾಮಿಲ್ಟನ್‌ನಲ್ಲಿ ಇವರು ಗೆದ್ದು ಬರುವರೆಂಬ ನಂಬಿಕೆ ಇದೆ…’ ಎಂಬುದಾಗಿ ಆಯ್ಕೆ ಸಮಿತಿ ಅಧ್ಯಕ್ಷ ಗೆವಿನ್‌ ಲಾರ್ಸನ್‌ ಹೇಳಿದ್ದಾರೆ.

ಅಂತಿಮ ಟೆಸ್ಟ್‌ ಪಂದ್ಯ ಮಾ. 25ರಿಂದ ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿದೆ.

ನ್ಯೂಜಿಲ್ಯಾಂಡ್‌ ತಂಡ: ಕೇನ್‌ ವಿಲಿಯಮ್ಸನ್‌ (ನಾಯಕ), ಟ್ರೆಂಟ್‌ ಬೌಲ್ಟ್, ನೀಲ್‌ ಬ್ರೂಮ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಟಾಮ್‌ ಲ್ಯಾಥಂ, ಜಿಮ್ಮಿ ನೀಶಮ್‌, ಹೆನ್ರಿ ನಿಕೋಲ್ಸ್‌, ಜೀತನ್‌ ಪಟೇಲ್‌, ಜೀತ್‌ ರಾವಲ್‌, ಮಿಚೆಲ್‌ ಸ್ಯಾಂಟ್ನರ್‌, ಟಿಮ್‌ ಸೌಥಿ, ನೀಲ್‌ ವ್ಯಾಗ್ನರ್‌, ಬ್ರಾಡ್ಲಿ ವಾಟಿÉಂಗ್‌.

Advertisement

Udayavani is now on Telegram. Click here to join our channel and stay updated with the latest news.

Next