ಕ್ರೈಸ್ಟ್‌ಚರ್ಚ್: ಪೊಲೀಸ್ ಪಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಸೇರಿಕೊಳ್ಳುವ ಸಲುವಾಗಿ ನ್ಯೂಜಿಲೆಂಡ್ ಸರ್ಕಾರ ಸಮವಸ್ತ್ರಕ್ಕೆ ಹಿಜಬ್ ಇರುವಂತೆ ವಿನ್ಯಾಸಗೊಳಿಸಿದೆ.
ಮುಸ್ಲಿಂ ಸಮುದಾಯದ ಮಹಿಳೆ ಝೀನಾ ಅಲಿ (30) ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದು, ಹೊಸ ವಿನ್ಯಾಸದ ಸಮವಸ್ತ್ರಕ್ಕೆ ಅವರನ್ನೇ ರಾಯಭಾರಿಯನ್ನಾಗಿ ನೇಮಿಸಲಾಗಿದೆ.
ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳಲ್ಲಿ ಕಿಡಿಗೇಡಿಯೊಬ್ಬ ದಾಳಿ ನಡೆಸಿ ಗುಂಡು ಹಾರಿಸಿದ ಘಟನೆಯಲ್ಲಿ 51 ಮಂದಿ ಅಸುನೀಗಿದ್ದರು. ಅದರಿಂದ ಖೇದಗೊಂಡಿದ್ದ ಝೀನಾ ಪೊಲೀಸ್ ಇಲಾಖೆ ಸೇರುವ ನಿರ್ಧಾರ ಕೈಗೊಂಡಿದ್ದರು. ಈ ವಾರಾಂತ್ಯದಲ್ಲಿ ಅವರು ಪೊಲೀಸ್ ತರಬೇತಿ ಪಡೆದು ತೇರ್ಗಡೆಯಾಗಲಿದ್ದಾರೆ. ಮಾತ್ರವಲ್ಲದೆ ಹೊಸತಾಗಿ ವಿನ್ಯಾಸಗೊಳಿಸಿದ ಹಿಜಬ್ ಸಹಿತ ಪೊಲೀಸ್ ಸಮವಸ್ತ್ರ ಧರಿಸುವ ನ್ಯೂಜಿಲೆಂಡ್‌ನ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಲಿದ್ದಾರೆ.
ಇದನ್ನೂ ಓದಿ:ಖ್ಯಾತ ತಮಿಳು ನಟನಿಗೆ ಕ್ಯಾನ್ಸರ್ ಕಂಟಕ: ವಿಡಿಯೋ ಮೂಲಕ ಸಹಾಯಕ್ಕಾಗಿ ಮನವಿ ಮಾಡಿದ ತವಸಿ
ಫಿಜಿಯಲ್ಲಿ ಜನಿಸಿದ್ದ ಅವರು, ಬಾಲ್ಯದಲ್ಲಿಯೇ ಕುಟುಂಬದ ಜತೆಗೆ ನ್ಯೂಜಿಲೆಂಡ್‌ಗೆ ವಲಸೆ ಬಂದಿದ್ದರು. ತಮ್ಮ ನಿರ್ಧಾರ ಇತರ ಮಹಿಳೆಯರೂ ಪೊಲೀಸ್ ಇಲಾಖೆಗೆ ಸೇರಲು ಸ್ಫೂರ್ತಿ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2008ರಲ್ಲಿ ಪೊಲೀಸ್ ಇಲಾಖೆಯಲ್ಲಿ ಪೇಟ ಧರಿಸಲು ಅನುಕೂಲವಾಗುವಂತೆ ನಿಯಮಗಳಲ್ಲಿ ಬದಲು ಮಾಡಲಾಗಿತ್ತು. ಭಾರತ ಮೂಲದ ಜಗ್‌ಮೋಹನ್ ಮಾಲಿ ಪೇಟಾ ಧರಿಸಿದ ಮೊದಲ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.