Advertisement

ನ್ಯೂಜಿಲ್ಯಾಂಡ್‌ ಓಪನ್‌: ಭಾರತದ ಸವಾಲು ಅಂತ್ಯ

03:05 AM May 04, 2019 | Sriram |

ಆಕ್ಲೆಂಡ್‌: ‘ನ್ಯೂಜಿಲ್ಯಾಂಡ್‌ ಓಪನ್‌’ ಬ್ಯಾಡ್ಮಿಂಟನ್‌ ಕೂಟದಲ್ಲಿ ಭಾರತದ ಏಕೈಕ ಭರವಸೆಯಾಗಿದ್ದ ಎಚ್.ಎಸ್‌. ಪ್ರಣಯ್‌ ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದ್ದಾರೆ.

Advertisement

ಶುಕ್ರವಾರ ನಡೆದ ಪಂದ್ಯದಲ್ಲಿ ಪ್ರಣಯ್‌ ಜಪಾನಿನ ಕಂಟಾ ಸುನೆಯಮ ವಿರುದ್ಧ 21-17, 15-21, 14-21 ಗೇಮ್‌ಗಳಿಂದ ಸೋತು ಟೂರ್ನಿಯಿಂದ ಹೊರನಡೆದಿದ್ದಾರೆ. ಈ ಪಂದ್ಯ ಒಂದು ಗಂಟೆ 13 ನಿಮಿಷಗಳವರೆಗೆ ನಡೆದಿತ್ತು. ಮೊದಲ ಗೇಮ್‌ ತೀವ್ರತೆಯಿಂದ ಕೂಡಿತ್ತು. 13 ಅಂಕಗಳವರೆಗೆ ಒಬ್ಬರ ಹಿಂದೆ ಒಬ್ಬರಂತೆ ಅಂಕವನ್ನು ಗಳಿಸುತ್ತಾ ಪಂದ್ಯದ ತೀವ್ರತೆಯನ್ನು ಹೆಚ್ಚಿಸಿದ್ದರು. ಅನಂತರ ಸತತ 4 ಅಂಕಗಳನ್ನು ಗಳಿಸಿದ ಪ್ರಣಯ್‌ 17-13 ಅಂಕಗಳ ಮುನ್ನಡೆ ಪಡೆದರು. ಆದರೆ ಕಂಟಾ ಅಂಕಗಳ ಅಂತರವನ್ನು 17-18ಕ್ಕೆ ತಂದಿಟ್ಟರು. ಆಟದ ವೇಗ ಹೆಚ್ಚಿಸಿಕೊಂಡ ಪ್ರಣಯ್‌ 21-17 ಅಂಕಗಳ ಅಂತರದಿಂದ ಮೊದಲ ಗೇಮ್‌ ತಮ್ಮದಾಗಿಸಿಕೊಂಡರು.

ದ್ವಿತೀಯ ಗೇಮ್‌ನಲ್ಲೂ ಉತ್ತಮ ಆರಂಭ ಪಡೆದ ಪ್ರಣಯ್‌ 11-5 ಅಂಕಗಳನ್ನು ಗಳಿಸಿದ್ದರು. ಆದರೆ ಪ್ರಣಯ್‌ ಮಾಡಿದ ತಪ್ಪುಗಳಿಂದ ಅವಕಾಶ ಪಡೆದ ಕಂಟಾ ಸುಲಭವಾಗಿ ಈ ಗೇಮ್‌ ಗೆದ್ದರು. ನಿರ್ಣಾಯಕ ಗೇಮ್‌ನಲ್ಲಿ ಇಬ್ಬರ ನಡುವೆ ಭಾರೀ ಪೈಪೋಟಿಯೇ ನಡೆಯಿತು. 14-14 ಸಮಬಲದ ಹೋರಾಟದಲ್ಲಿದ್ದಾಗ ಅತ್ಯುತ್ತಮ ಆಟವಾಡಿದ ಕಂಟಾ ಪ್ರಣಯ್‌ಗೆ ಅಂಕ ಗಳಿಸುವ ಅವಕಾಶವನ್ನು ನೀಡದೆ 21-14 ಅಂಕಗಳಿಂದ ಗೆದ್ದು ಸೆಮಿಫೈನಲ್ಗೆ ಮುನ್ನಡೆದರು. ಈ ಸೋಲಿನೊಂದಿಗೆ ಕೂಟದಲ್ಲಿ ಭಾರತೀಯ ಸವಾಲು ಕೊನೆಗೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next