ನ್ಯೂಜಿಲ್ಯಾಂಡ್ : ಹೆರಿಗೆ ನೋವಿನ ನಡುವೆಯೂ ನ್ಯೂಜಿಲೆಂಡ್‌ನ ಸಂಸದೆಯೊಬ್ಬರು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ..
ನ್ಯೂಜಿಲ್ಯಾಂಡಿನ ಸಂಸದೆ ಜೂಲಿ ಅನ್ನೆ ಜೆಂಟರ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಸ್ಪತ್ರೆಗೆ ದಾಖಲಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಮಾಹಿತಿ ಹಂಚಿಕೊಂಡಿದ್ದಾರೆ.
ಭಾನುವಾರ ಮುಂಜಾನೆ ಎರಡು ಗಂಟೆಯ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಯಾರಿಗೂ ತೊಂದರೆ ಆಗಬಾರದೆಂದು ಜೂಲಿ ಅನ್ನೆ ಜೆಂಟರ್ ಅವರು ಸೈಕಲ್ ಏರಿ ಆಸ್ಪತ್ರೆಗೆ ದಾಖಲಾಗಿದ್ದು ಮೂರು ಗಂಟೆ ಸುಮಾರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಗಿ ಸಂಸದೆ ಸಾಮಾಜಿಕ ಜಾಲತಾಣದಲ್ಲಿ ಸೈಕಲ್ ಏರಿ ಆಸ್ಪತ್ರೆಗೆ ಬಂದ ಕಥೆಯನ್ನು ಬರೆದುಕೊಂಡಿದ್ದಾರೆ.
ಅಂದ ಹಾಗೆ ಜೂಲಿ ಅನ್ನೆ ಜೆಂಟರ್ ಸೈಕಲ್ ಏರಿ ಆಸ್ಪತ್ರೆಗೆ ಬಂದು ಮಗುವಿಗೆ ಜನ್ಮ ನೀಡಿರುವುದು ಇದು ಎರಡನೇ ಭಾರಿ, ಈ ಹಿಂದೆಯೂ ಮೊದಲ ಮಗುವಿಗೆ ಜನ್ಮ ನೀಡುವ ಸಮಯದಲ್ಲೂ ಇದೆ ರೀತಿ ಸೈಕಲ್ ನಲ್ಲೆ ಆಸ್ಪತ್ರೆಗೆ ಬಂದಿದ್ದರು…
ಇದನ್ನೂ ಓದಿ : 4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ
ಜೆಂಟರ್ ಅವರ ಪೋಸ್ಟ್ ಗೆ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ.