Advertisement

ಒಮಿಕ್ರಾನ್ ಭೀತಿ; ಕೋವಿಡ್ ಸೋಂಕು ದಿಢೀರ್ ಹೆಚ್ಚಳ, ತುರ್ತುಪರಿಸ್ಥಿತಿ ಘೋಷಿಸಿದ ನ್ಯೂಯಾರ್ಕ್

01:28 PM Nov 27, 2021 | Team Udayavani |

ವಾಷಿಂಗ್ಟನ್: ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗವರ್ನರ್ ಕಾಥೈ ಹೊಚುಲ್ ಅವರು ನ್ಯೂಯಾರ್ಕ್ ನಾದ್ಯಂತ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:‘ಅಮೃತ್‌ ಅಪಾರ್ಟ್‌ಮೆಂಟ್ಸ್‌’ ಚಿತ್ರ ವಿಮರ್ಶೆ: ಕಾಂಕ್ರೀಟ್‌ ಕಾಡಿನ ತಲ್ಲಣಗಳ ಚಿತ್ರಣ

2020ರ ಏಪ್ರಿಲ್ ನಿಂದ ಈವರೆಗೆ ರಾಜ್ಯದಲ್ಲಿ ಕೋವಿಡ್ 19 ರೂಪಾಂತರಿ ತಳಿಯ ಪ್ರಕರಣಗಳು ಕಂಡು ಬಂದಿಲ್ಲ. ಆದರೆ ಕಳೆದ ಒಂದು ತಿಂಗಳಿನಿಂದ ಕೋವಿಡ್ 19 ಸೋಂಕಿನಿಂದ ದಿನಂಪ್ರತಿ 300ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದೆ. ಈ ನಿಟ್ಟಿನಲ್ಲಿ ಜನವರಿ 15ರವರೆಗೆ ರಾಜ್ಯಾದ್ಯಂತ ತುರ್ತುಪರಿಸ್ಥಿತಯನ್ನು ಘೋಷಿಸಿರುವುದಾಗಿ ಗವರ್ನರ್ ಹೊಚುಲ್ ತಿಳಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆಯನ್ನು ಹೆಚ್ಚಳಗೊಳಿಸಲು ಹಾಗೂ ಕೋವಿಡ್ ರೂಪಾಂತರಿ ತಳಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಮಾರಣಾಂತಿಕ ಒಮಿಕ್ರಾನ್ ವೈರಾಣು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗವರ್ನರ್ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

ಒಮಿಕ್ರಾನ್ ರೂಪಾಂತರಿ ವೈರಾಣು ಪತ್ತೆಯಾದ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಶುಕ್ರವಾರ ದಕ್ಷಿಣ ಆಫ್ರಿಕಾದ ಪ್ರಜೆಗಳ ಸಂಚಾರದ ಮೇಲೆ ನಿರ್ಬಂಧ ಹೇರಿದ್ದರು. ಈವರೆಗೂ ಅಮೆರಿಕದಲ್ಲಿ ರೂಪಾಂತರಿ ಒಮಿಕ್ರಾನ್ ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next