Advertisement

ನ್ಯೂಯಾರ್ಕ್‌: ವಾರಾಂತ್ಯದ ಮೋಜಿಗೆ ಬ್ರೇಕ್‌

04:24 PM May 03, 2020 | mahesh |

ನ್ಯೂಯಾರ್ಕ್‌: ಅಮೆರಿಕದ ವಿವಿಧ ರಾಜ್ಯಗಳಲ್ಲಿ ಕೋವಿಡ್‌ 19 ಅಬ್ಬರ ಜೋರಾಗಿದೆ. ಈ ನಡುವೆಯೂ ನ್ಯೂಯಾರ್ಕ್‌ ಮತ್ತು ಕ್ಯಾಲಿಫೋರ್ನಿಯಾ ದಲ್ಲಿ ಕಳೆದ ವಾರಾಂತ್ಯದಲ್ಲಿ ಜನರು ಕಡಲ ತೀರಕ್ಕೆ ತೆರಳಿ ಮೋಜು-ಮಸ್ತಿಯಲ್ಲಿ ತೊಡಗಿದ್ದರು. ಆದರೆ ಈ ವಾರಾಂತ್ಯದಲ್ಲಿ ಅದು ಮರುಕಳಿಸದಂತೆ ಎಚ್ಚರ ವಹಿಸಲು ನ್ಯೂಯಾರ್ಕ್‌ ಪೊಲೀಸರು ನಿರ್ಧರಿಸಿದ್ದಾರೆ. ಈಗಾಗಲೇ ನಗರದ ಕಡಲತೀರ ಪ್ರದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳನ್ನು ನಿಯೋಜಿಸಿದ್ದು, ನಿಯಮ ಉಲ್ಲಂಘಕರ ವಿರುದ್ಧ ದಂದ ವಿಧಿಸುವುದಲ್ಲದೇ, ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಲಾಗಿದೆ.

Advertisement

ಕೋವಿಡ್‌-19 ಪೀಡಿತ ನಗರಗಳ ಪೈಕಿ ನ್ಯೂಯಾರ್ಕ್‌ ಅಗ್ರಸ್ಥಾನದಲ್ಲಿದೆ. ಪ್ರತಿನಿತ್ಯ ಸೋಂಕಿತರ ಸಂಖ್ಯೆ ಸಾವಿರಗಡಿ ದಾಟುತ್ತಿದ್ದು, ಸಾವಿನ ಪ್ರಮಾಣವೂ ಏರುತ್ತಿದೆ. ಆದರೆ ಪರಿಸ್ಥಿತಿಯ ತೀವ್ರತೆಯನ್ನು ಅರ್ಥ ಮಾಡಿಕೊಳ್ಳದ ಜನರು ಸರಕಾರದ ಆದೇಶವನ್ನು ಧಿಕ್ಕರಿಸಿ, ಸಾಮಾಜಿಕ ಅಂತರ ಸೇರಿದಂತೆ ಇತರೆ ಯಾವುದೇ ಸುರಕ್ಷಾ ಕ್ರಮಗಳನ್ನು ಪಾಲಿಸುತ್ತಿಲ್ಲ. ಜತೆಗೆ ಕಡಲತೀರ ಪ್ರದೇಶದಲ್ಲಿ ವಿಹರಿಸತೊಡಗಿದ್ದರು. ಈ ವಾರಾಂತ್ಯದಲ್ಲೂ ನಗರದ ತಾಪಮಾನ ಏರುವ ನಿರೀಕ್ಷೆಯಿದ್ದು, ಮತ್ತೆ ಜನರು ಕಡಲತೀರಗಳತ್ತ ಧಾವಿಸಬಹುದೆಂದು ಅಂದಾಜಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಆರೆಂಜ್‌ ಕೌಂಟಿಯ ನ್ಯೂಪೋರ್ಟ್‌ ಲಾಸ್‌ ಏಂಜಲೀಸ್‌ ಮತ್ತಿತರ ಕಡಲತೀರ ಪ್ರದೇಶಗÙಲ್ಲೂ ಕಣ್ಗಾವಲು ವ್ಯವಸ್ಥೆ ಮಾಡಿದೆ. ಜತೆಗೆ ನ್ಯೂಯಾರ್ಕ್‌ ನಗರಾದ್ಯಂತ ಹೆಚ್ಚುವರಿಯಾಗಿ 1,000 ಪೊಲೀಸರನ್ನು ನಿಯೋಜಿಸಲಾಗಿದೆ. ಕಡಲತೀರವಲ್ಲದೇ ಉದ್ಯಾನವನಗಳು ಸೇರಿದಂತೆ ಇತರೆ ಸಾರ್ವಜನಿಕ ಪ್ರದೇಶಗಳಲ್ಲೂ ಜನರು ಸೇರದಂತೆ ತಡೆಯುವುದು ಸರಕಾರದ ಉದ್ದೇಶವಾಗಿದೆ. ಬದಲಾಗುತ್ತಿರುವ ಹವಾಮಾನವೂ ಕಡಲತೀರದ ನಗರಗಳಿಗೆ ಹೊಸ ಸವಾಲಾಗಿ ಪರಿಣಮಿಸಿದೆ.

ಈಗಾಗಲೇ ನ್ಯೂಯಾರ್ಕ್‌ ರಾಜ್ಯದಲ್ಲಿ ಸಾಕಷ್ಟು ನಷ್ಟ ಉಂಟಾಗಿದ್ದು, ಮೂರುಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳಿವೆ. ಈ ಪೈಕಿ 24 ಸಾವಿರಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next