ನ್ಯೂಯಾರ್ಕ್: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಹಬ್ಬವಾದ ದೀಪಾವಳಿಗೆ ಶಾಲೆಗಳಲ್ಲಿ ಸಾರ್ವಜನಿಕ ರಜೆ ನೀಡಬೇಕು ಎಂದು ನ್ಯೂಯಾರ್ಕ್ ನಗರದ ಮೇಯರ್ ಘೋಷಿಸಿದ್ದಾರೆ. ಇದು ಅಮೆರಿಕದಲ್ಲಿರುವ ಭಾರತೀಯರಿಗೆ ಸಿಕ್ಕ ದೊಡ್ಡ ಜಯ ಎಂದು ಬಣ್ಣಿಸಲಾಗಿದೆ.
ನ್ಯೂಯಾರ್ಕ್ ಮೇಯರ್ ಎರಿಕ್ ಆ್ಯಡಮ್ಸ್ ಈ ಘೋಷಣೆ ಮಾಡಿದ್ದು, ದೀಪಾವಳಿಗೆ ಶಾಲಾ ರಜೆ ಘೋಷಣೆ ಮಾಡುವ ಕಾಯಿದೆ ತರುವ ಭಾಗವಾಗಿದ್ದು ಹೆಮ್ಮೆ ತಂದಿದೆ ಎಂದಿದ್ದಾರೆ.
ಇದನ್ನೂ ಓದಿ:ಬಾಡಿಗೆ ಮನೆಯಲ್ಲಿರುವವರು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?
ನಗರದಲ್ಲಿ ಭಾರತೀಯ ಹಬ್ಬವಾದ ದೀಪಾವಳಿಯನ್ನು ರಜಾದಿನವನ್ನಾಗಿ ಮಾಡಲು “ಹೋರಾಟ”ದ ನೇತೃತ್ವ ವಹಿಸಿದ್ದ ನ್ಯೂಯಾರ್ಕ್ ಅಸೆಂಬ್ಲಿ ಸದಸ್ಯೆ ಜೆನಿಫರ್ ರಾಜ್‌ಕುಮಾರ್, ದಕ್ಷಿಣ ಏಷ್ಯಾ ಸಮುದಾಯದ ಎರಡು ದಶಕಗಳ ಹೋರಾಟದ ನಂತರ, ಈ ಗೆಲುವನ್ನು ಸಾಧಿಸಲು ಹೆಮ್ಮೆಪಡುತ್ತೇನೆ ಎಂದು ಹೇಳಿದರು.
ಆದರೆ ಈ ವರ್ಷ, 2023-2024ರ ಶಾಲಾ ಕ್ಯಾಲೆಂಡರ್ ಅನ್ನು ಮೊದಲೇ ನಿರ್ಧರಿಸಿದ್ದರಿಂದ ವಿದ್ಯಾರ್ಥಿಗಳಿಗೆ ದೀಪಾವಳಿಯಂದು ರಜೆ ಸಿಗುವುದಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.