Advertisement

ಹೊಸ ವರ್ಷ, ಹೊಸ ಕಾನೂನು, ಹೊಸ ಭಾರತ : ಜಿಎಸ್‌ಟಿ ಬಗ್ಗೆ ಮೋದಿ

10:43 AM Mar 30, 2017 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಜಿಎಸ್‌ಟಿ ಪೂರಕ ಮಸೂದೆಗಳು ಅನುಮೋದನೆಗೊಂಡಿರುವುದನ್ನು ಸ್ವಾಗತಿಸಿದ್ದಾರೆ. 

Advertisement

ಜಿಎಸ್‌ಟಿ ಪೂರಕ ಮಸೂದೆಗಳು ಪಾಸಾದೊಡನೆಯೇ ಹಿಂದಿಯಲ್ಲಿ ಟ್ವೀಟ್‌ ಮಾಡಿದ ಪ್ರಧಾನಿ ಮೋದಿ “ಜಿಎಸ್‌ಟಿ ಮಸೂದೆಗಳು ಪಾಸಾಗಿರುವುದಕ್ಕೆ ದೇಶದ ಎಲ್ಲ ಜನರಿಗೆ ಅಭಿನಂದನೆಗಳು; ಹೊಸ ವರ್ಷ, ಹೊಸ ಮಸೂದೆ, ಹೊಸ ಭಾರತ’ ಎಂದು ಹೇಳಿದ್ದಾರೆ.

“ಸದ್ಯಕ್ಕೆ ಜಮ್ಮು ಕಾಶ್ಮೀರವನ್ನು ಹೊರತುಪಡಿಸಿ ನಿನ್ನೆ ಬುಧವಾರ ಸಂಸತ್ತಿನಲ್ಲಿ ಪಾಸಾಗಿರುವ ಜಿಎಸ್‌ಟಿ ಮಸೂದೆ ದೇಶದ ಸಂವಿಧಾನ ಶಿಲ್ಪಿಗಳ ಗಣರಾಜ್ಯ ವ್ಯವಸ್ಥೆಯ ಮುಂಗಾಣ್‌ಕೆಗೆ  ಅನುಗುಣವಾಗಿದ್ದು ದೇಶಕ್ಕೆ ಏಕೀಕೃತ ಮಾರುಕಟ್ಟೆಯನ್ನು ಹೊಂದುವ ಗುರಿಯತ್ತ ಈಗ ಒಂದು ಹೆಜ್ಜೆ ನಿಕಟವಾಗಿದೆ’ ಎಂದು ಮೋದಿ ಹೇಳಿದರು. 

ಸಂವಿಧಾನದಡಿ ತೆರಿಗೆಯ ವಿಶೇಷಾಧಿಕಾರ ಹೊಂದಿರುವ ಜಮ್ಮು ಕಾಶ್ಮೀರವು ರಾಜ್ಯದಲ್ಲಿ ಜಿಎಸ್‌ಟಿಯನ್ನು ಜಾರಿಗೆ ತರಲು ಎಲ್ಲ ನಾಲ್ಕು ಮಸೂದೆಗಳನ್ನು ಪಾಸು ಮಾಡಬೇಕಾಗುವುದು. 

Advertisement

Udayavani is now on Telegram. Click here to join our channel and stay updated with the latest news.

Next