Advertisement

New year  ಮೋದಿ ಗಿಫ್ಟ್: ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ 8-10 ರೂ. ಕಡಿತ ?

11:35 PM Dec 28, 2023 | Team Udayavani |

ಹೊಸದಿಲ್ಲಿ: ಹೊಸವರ್ಷದ ಆಗಮನ ಹಾಗೂ ಲೋಕಸಭೆ ಚುನಾವಣೆಯ ಹೊಸ್ತಿಲಿಗೆ ದೇಶ ತಲುಪುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶವಾಸಿಗಳಿಗೆ ಬಂಪರ್‌ ಕೊಡುಗೆ ನೀಡಲು ಸಜ್ಜುಗೊಂಡಿದೆ. ಹೊಸ ವರ್ಷಕ್ಕೆ ಕಾಲಿಡುವ ಮುನ್ನವೇ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳಲ್ಲಿ ಪ್ರತೀ ಲೀಟರ್‌ಗೆ 8 ರಿಂದ 10 ರೂ.ಗಳಷ್ಟು ಕಡಿತ ಘೋಷಿಸುವ ಸಾಧ್ಯತೆಗಳಿದೆ ಎಂದು ಹಲವು ಇಂಗ್ಲಿಷ್‌ ವೆಬ್‌ಸೈಟ್‌ಗಳು ವರದಿ ಮಾಡಿವೆ.

Advertisement

ಮೂಲಗಳ ಪ್ರಕಾರ ಈಗಾಗಲೇ ಇಂಧನ ಸಚಿವಾಲ ಯವು ಈ ಸಂಬಂಧಿಸಿದಂತೆ ಪ್ರಸ್ತಾವನೆಯನ್ನೂ ಸಿದ್ದಪಡಿಸಿದ್ದು, ಪ್ರಧಾನಿ ಅವರ ಅನುಮೋದನೆಗಾಗಿ ಕಾಯುತ್ತಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿ ರುವುದು ಈ ನಿರ್ಣಯಕ್ಕೆ ಕಾರಣ ಎನ್ನಲಾಗಿದೆ. 2022-23ನೇ ಆರ್ಥಿಕ ವರ್ಷದಲ್ಲಿ ಪ್ರತೀ ಬ್ಯಾರೆಲ್‌ಗೆ 93.15 ಡಾಲರ್‌ಗಳಿಷ್ಟಿದ್ದ ಕಚ್ಚಾ ತೈಲ ಬೆಲೆ ಪ್ರಸಕ್ತ ವಿತ್ತೀಯ ವರ್ಷದ ಎಪ್ರಿಲ್‌ -ಮಾರ್ಚ್‌ ಅವಧಿಯಲ್ಲಿ ಪ್ರತೀ ಬ್ಯಾರೆಲ್‌ಗೆ 77.14 ಡಾಲರ್‌ಗಳಷ್ಟು ಕಡಿಮೆ ಯಾಗಿತ್ತು. ಸೆಪ್ಟಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಮಾತ್ರ 93.54 ಡಾಲರ್‌ ಹಾಗೂ 90.08 ಡಾಲರ್‌ಗೆ ತಗ್ಗಿತ್ತು. ಇನ್ನು ಇಂಧನ ಬೆಲೆ ಕಡಿತವು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ತರಲಿದೆ ಎಂದೂ ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next