Advertisement

NEW YEAR: ಕಳೆದೇ ಹೋಯಿತು ಕಳೆಯುತ್ತಾ ವರುಷ!

03:37 PM Jan 06, 2024 | Team Udayavani |

ಅಂತೂ ಇಂತೂ ವರ್ಷದ ಕೊನೆಯ ಹಂತ ತಲುಪಿದ್ದೇವೆ. ಇನ್ನೇನು 2023 ಮುಗಿದು 2024 ನ್ನು ಎದುರುಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈ ವರ್ಷ ಘಟಿಸಿದ ಘಟನೆಗಳು ಇನ್ನು ನೆನಪಾಗಿ ಮಾತ್ರ ಉಳಿಯಲಿವೆ. ಅಂತೂ 2023 ನನ್ನ ಪಾಲಿಗೆ ಸಾಕಷ್ಟು ಸಿಹಿ-ಕಹಿ ನೆನಪುಗಳನ್ನು ನೀಡಿದೆ.

Advertisement

ಕಳೆದ ಕೆಲವು ಗಳಿಗೆಗಳು ಕಣ್ಣನ್ನು ಒದ್ದೆಯಾಗಿಸಿದರೆ, ಅವು ಬಾಳಿನಲ್ಲಿ ಘಟಿಸಿ ಮುಂದಿನ ದಿನಗಳನ್ನು ಹೇಗೆ ಎದುರಿಸಬೇಕೆನ್ನುವ ನೀತಿ ಬೋಧಿಸಿವೆ. ಇಲ್ಲಿ ನಡೆಯುವ ನಿರಂತರ ಏಳುಬೀಳಿನ ಹೋರಾಟದ ನಡುವೆಯೂ ಗೆಲುವಿಗಾಗಿ ತವಕಿಸುವ ಮನದೊಳಗೆ ಆಲೋಚನೆಗಳ ಸರಮಾಲೆಯೇ ಇದೆ. ಆ ಆಲೋಚನೆಗಳಲ್ಲಿ ಸಿಹಿ ಕಹಿ ಬೆಸುಗೆಯಿದೆ. ಕೆಲವು ಬಾರಿ ಅತಿಯಾಗಿಯೇ ನೆನಪು ಕಾಡುತ್ತದೆ. ಆದರೆ ಇದನ್ನು ನೆನೆಯುತ್ತಲೇ ಇದ್ದರೆ ಕಷ್ಟ ನಷ್ಟ. ಅಂದುಕೊಂಡಂತಹ ಕಾರ್ಯಗಳು ನಡೆಯುವುದೇ ಇಲ್ಲ. ಕಳೆದು ಹೋದ ವರುಷದಂತೆಯೇ ಈ ಜೀವನ ಹೇಗೆ ಎಂದರೆ ಮಿಂಚಂತೆ ಮರೆಯಾಗುತ್ತದೆ.

ಗೆಳೆಯರೇ, ನಮ್ಮ ಮುಂದೆ ಇರುವುದು ಈಗ ಮೊತ್ತೂಂದು ಹೊಸ ವರ್ಷ. ಈ ವರ್ಷದಲ್ಲಿ ಏನು ಮಾಡಬೇಕೆನ್ನುವ ಆಲೋಚನೆ, ಉಪಾಯ, ಯೋಜನೆಗಳೆಂಬ ಅಸ್ತ್ರಗಳನ್ನು ಮೊದಲೇ ನಮ್ಮ ಬತ್ತಳಿಕೆಯಲ್ಲಿ ಜೋಪಾನವಾಗಿರಿಸಬೇಕು. ಅದನ್ನು ಸಮಯ-ಸಂದರ್ಭ ಬಂದಾಗ ಉಪಯೋಗಿಸಬೇಕು. ಯಶಸ್ಸನ್ನು ಕಾಣಬೇಕು. ಕಳೆದು ಹೋದ ದಿನಗಳಲ್ಲಿ ಆಗದ- ನಡೆಯದ ಅದೆಷ್ಟು ಘಟನೆಗಳು ಇರಬಹುದು. ಆದರೆ ಮುಂಬರುವ ಯೋಜನಾ ದಿನಗಳಲ್ಲಿ ಆ ಆಲೋಚನೆಗಳು ಈಡೇರಲಿ. ಯಾವುದೇ ಚಿಂತೆಯೊಳಗೆ ಈಜಾಡುವ ಬದಲು, ಹೊಸ ಚಿಂತನೆಗಳಿಂದ, ನವ ಆಲೋಚನೆಗಳಿಂದ ನವ ವರ್ಷವೂ ನವ ಉÇÉಾಸವನ್ನು ನೀಡಲಿ. ಎಲ್ಲರ ಬಾಳಿಗೂ ಆಶಾದಾಯಕವಾಗುವ ಆಶಾಕಿರಣವನ್ನು ಮೂಡಿಸುವ ವರ್ಷವಾಗಲಿ.

ಈ ವರ್ಷದಲ್ಲಿ ದಿನಗಳು, ಸೆಕೆಂಡ್‌ಗಳು, ನಿಮಿಷಗಳು, ಗಂಟೆಗಳು, ದಿನಗಳನ್ನು ಕಳೆದಿದ್ದೇವೆ. ಈ ಪಯಣದ ಹಾದಿಯಲ್ಲಿ ಬಂದು ಹೋದವರೆಷ್ಟೋ, ಬಂದು ಶಾಶ್ವತವಾಗಿ ಮನದಲ್ಲಿ ಜಾಗ ಪಡೆದವರೆಷ್ಟೋ. ಹಾಗೆಯೇ ಮನದಲ್ಲಿ ಜಾಗವ ಪಡೆದು ತನು ಮನುವ ತಣಿಸಿದವರಿಗೆ ನನ್ನದೊಂದು ಧನ್ಯವಾದ.

ಇನ್ನೇನು ಹೊಸ ಕ್ಯಾಲೆಂಡರ್‌ ವರ್ಷದ ಹೊಸ್ತಿಲಲ್ಲಿ, ಹೊಸ ವರ್ಷದ ಆರಂಭದಲ್ಲಿ ನಾವಿದ್ದೇವೆ. ಸ್ನೇಹಮಯ ಜೀವನ, ಶಾಂತಿಯ ತೋಟ ನಮ್ಮದಾಗಲಿ.

Advertisement

-ಗಿರೀಶ್‌ ಪಿ.

ವಿ.ವಿ., ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next