Advertisement

ಹೊಸವರ್ಷ ಆಚರಣೆ: ಮೇಲ್ಸೇತುವೆ ಬಂದ್; ಬಿಗು ಭದ್ರತೆ- ಸಿಸಿಟಿವಿ ಕಣ್ಗಾವಲು

09:47 AM Jan 01, 2020 | Team Udayavani |

ಬೆಂಗಳೂರು: ಪ್ರತಿವರ್ಷದಂತೆ ಈ ಸಲವೂ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ರಾಜಧಾನಿ ಸಜ್ಜಾಗಿದೆ. ನಗರದ ಜನರು ಮಧ್ಯರಾತ್ರಿ ಪಾರ್ಟಿ ಮಾಡಿ ಹೊಸ ವರ್ಷ ಆಚರಿಸಲು ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ನಗರ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

Advertisement

ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಮೇಲ್ಸೆತುವೆಗಳನ್ನು ಇಂದು ರಾತ್ರಿ ಬಂದ್ ಮಾಡಲಾಗುವುದು. ಅದರಂತೆ ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ವಿಮಾನ ನಿಲ್ದಾಣ ರಸ್ತೆ, ವೈಟ್ ಪೀಲ್ಡ್ , ಹೆಚ್ಎಸ್ಆರ್ ಲೇಔಟ್, ಪುಲಿಕೇಶಿ ನಗರ, ರಿಚ್ಮಂಡ್ ಪ್ಲೈಒವರ್, ಡೈರಿ ಸರ್ಕಲ್, ಮಾರ್ಕೆಟ್ ರಸ್ತೆ, ಆನಂದರಾವ್ ಸರ್ಕಲ್, ಬನಶಂಕರಿ ಮೇಲ್ಸೆತುವೆಗಳನ್ನು ಇಂದು ರಾತ್ರಿ 10 ಗಂಟೆಯಿಂದ ಬಂದ್ ಮಾಡಲಾಗುವುದು ಎಂದು ವರದಿಯಾಗಿದೆ.

ಹೊಸ ವರ್ಷಾಚರಣೆಗೆ ಅತೀ ಹೆಚ್ಚು ಜನ ಸೇರುವ ಎಂ.ಜಿ ರೋಡ್, ಬ್ರಿಗೇಡ್ ರೋಡ್ ಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅಲ್ಲಲ್ಲಿ ಸಿಸಿ ಕ್ಯಾಮಾರಾಗಳು ಮತ್ತು ವಾಚ್ ಟವರ್ ಗಳನ್ನು ನಿರ್ಮಿಸಿ ಯಾವುದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ಹದ್ದಿನ ಕಣ್ಣಿಡಲಾಗಿದೆ.

ಹೊಸ ವರ್ಷಾಚರಣೆಯ ಹೆಸರಲ್ಲಿ ಕುಡಿದು ವಾಹನ ಚಲಾಯಿಸದವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next