Advertisement
ಆ ದಿನ ಉಳಿದ ದಿನಗಳಂತೆಯೇ ಆರಂಭವಾಯಿತು. ಆದರೆ ಎಂದಿನಂತೆ ಮುಗಿಯಲಿಲ್ಲ. ಆ ಪುಟ್ಟ ಮನೆಯ ಪುಟ್ಟ ಕೋಣೆಯಲ್ಲಿ ಬೆಂಕಿ ಧಗಧಗ ಉರಿಯುತ್ತಿತ್ತು. ನಾವೆಲ್ಲ ನೋಡುತ್ತಾ ನಿಂತಿದ್ದೆವು. ಮಂದಿ ನೀರೆರೆಚುತ್ತಿದ್ದರು. ಅರ್ಧ ಸುಟ್ಟ ನನ್ನ ಗೆಳೆಯ ಹೊರಗಡೆ ಜಗುಲಿಯಲ್ಲಿ ನರಳುತ್ತಾ ಮಲಗಿದ್ದ. ತಡೆಯಲಾರದ ಉರಿಗೆ ಹೊದ್ದುಕೊಳ್ಳಲು ಒಂದು ಪಂಚೆಯನ್ನು ಬೇಡುತ್ತಾ ನರಳುತ್ತಿದ್ದ. ಕೋಣೆಯೊಳಗಣ ಬೆಂಕಿ ಕಿಟಕಿಯ ಸಮೀಪ ಸಹ ಹೋಗಗೊಡದೆ ಧಗಧಗಿಸುತ್ತಿತ್ತು. ಹೊತ್ತಿದ ಬೆಂಕಿಗಳೆಲ್ಲ ಆರಲೇಬೇಕು. ಈ ಜ್ವಾಲೆಯೂ ನಂದಿತು ನಿಜ, ಆದರೆ ಆರುವ ಮುನ್ನ ನಾಲ್ಕು ಜೀವಗಳನ್ನು ಇನ್ನೆಂದೂ ಉಸಿರಾಡಲಾರದಂತೆ ಬೂದಿಮಾಡಿ ಹೋಯಿತು. ಕೆಲವೇ ಗಂಟೆಗಳ ಕೆಳಗೆ, ಹಿಂದಿನ ದಿನ ಸಂಜೆ ಹಾದಿಯಲ್ಲಿ ಸಿಕ್ಕು “ನಮ್ಮನೆಗೆ ಬಾರೋ’ ಎಂದಿದ್ದ ಪುಟ್ಟ ತಮ್ಮನಂಥಾ ಗೆಳೆಯ ಹಾಗೂ ಅವನ ಇಡೀ ಕುಟುಂಬ ಇದ್ದಿಲಲ್ಲಿ ಕೆತ್ತಿದ ಭಗ್ನ ವಿಗ್ರಹಗಳಂತೆ ನಿಶ್ಚಲವಾಗಿ ಮಲಗಿದ್ದರು. ಜನರೆಲ್ಲ ಎರಚಿದ ನೀರಿಗೆ ಶವಗಳ ಮೇಲಿನ ಜ್ವಾಲೆಯನ್ನು ನಿಲ್ಲಿಸಲು ಸಾಧ್ಯವಾಯಿತೇ ಹೊರತು ತೆರಳಿದ ಜೀವಗಳ ಮರಳಿಸಲು ಆಗಲೇಇಲ್ಲ.
Advertisement
New Year: ಹೊಸ ಚೌಕುಳಿಯೊಳಗೆ ಹಳೆಯ ನೋವು..
12:59 PM Dec 31, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.