Advertisement
ಮುಖ್ಯವಾಗಿ ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಅಸ್ತು ಎನ್ನುವುದು. ಇದರ ಜತೆಗೆ ಈ ಹಿಂದಿನ ವೇತನ ಪರಿಷ್ಕರಣೆ ಬಾಕಿ, ಭವಿಷ್ಯ ನಿಧಿ ಮತ್ತಿತರ ಬಾಕಿ ಪಾವತಿಸುವುದು. ಇದರಿಂದಾಗುವ ಆರ್ಥಿಕ ಹೊರೆಯನ್ನು ಪ್ರಯಾಣ ದರ ಪರಿಷ್ಕರಣೆ ಮೂಲಕ ತಕ್ಕಮಟ್ಟಿಗೆ ತಗ್ಗಿಸುವ ಲೆಕ್ಕಾಚಾರ ಸರಕಾರದ ಮುಂದಿದೆ ಎನ್ನಲಾಗಿದೆ.
Related Articles
ಸಾಲ, ತುಟ್ಟಿಭತ್ತೆ, ಭವಿಷ್ಯನಿಧಿ, ಡೀಸೆಲ್ ಬಾಕಿ ಸೇರಿದಂತೆ ನಾಲ್ಕೂ ನಿಗಮಗಳ ಮೇಲೆ ಸುಮಾರು 6,330 ಕೋಟಿ ರೂ. ಹೊಣೆಗಾರಿಕೆ ಇದೆ. ಇಂತಹ ಸಂದರ್ಭದಲ್ಲಿ ಅದನ್ನು ಪಾವತಿ ಮಾಡಲು ಸರಕಾರಕ್ಕೂ ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ. ಬದಲಿಗೆ 2 ಸಾವಿರ ಕೋಟಿ ರೂ. ವರೆಗೆ ಸಾಲದ ಖಾತರಿ ನೀಡಲು ಸರಕಾರ ಈಗಾಗಲೇ ಅನುಮತಿ ನೀಡಿದೆ.
Advertisement
ಜತೆಗೆ ದರ ಪರಿಷ್ಕರಣೆ ಮಾಡಿ 4 ವರ್ಷಗಳು ಕಳೆದಿದ್ದು, ಈ ಅವಧಿಯಲ್ಲಿ ಆಟೋ, ಆ್ಯಪ್ ಆಧಾರಿತ ಟ್ಯಾಕ್ಸಿಗಳ ದರ ಎಷ್ಟಿತ್ತು? ಈಗ ಎಷ್ಟಾಗಿದೆ? ಡೀಸೆಲ್ ಬೆಲೆ ಎಷ್ಟಿತ್ತು? ಮತ್ತು ಎಷ್ಟಾಗಿದೆ? ಎಂಬುದನ್ನು ಹೋಲಿಕೆ ಮಾಡಿ, ಪರಿಷ್ಕರಣೆಗೆ ಕ್ರಮ ಕೈಗೊಳ್ಳುವ ಚಿಂತನೆ ಇದೆ. ಇವೆರಡರ ಸಹಾಯದಿಂದ ವೇತನ ಪರಿಷ್ಕರಣೆ ಮತ್ತು ಬಾಕಿ ಪಾವತಿಯ ಲೆಕ್ಕಾಚಾರ ಹಾಕಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮಾನ ವೇತನದ ಬೇಡಿಕೆ ನೇಪಥ್ಯಕ್ಕೆ?ಈ ಮಧ್ಯೆ ಸಂಕ್ರಾಂತಿ ಅನಂತರ ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ಮನವೊಲಿಸಿ ಬಜೆಟ್ವರೆಗೆ ತಳ್ಳುವ ಮತ್ತೂಂದು ಲೆಕ್ಕಾಚಾರವೂ ಇದೆ. ಬಜೆಟ್ನಲ್ಲೇ ನಿಗಮಗಳಿಗೆ ಅನುದಾನ ಮೀಸಲಿಟ್ಟು, ಆ ಮೂಲಕ ಬಳಕೆಗೆ ಅವಕಾಶ ಕಲ್ಪಿಸುವ ಅಭಯ ನೀಡುವ ಚಿಂತನೆ ನಡೆದಿದೆ. ಆದರೆ ಇದು ಸಂಘಟನೆಗಳು ಎಷ್ಟರಮಟ್ಟಿಗೆ ಸಹಕಾರ ನೀಡುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಈ ಪರಿಷ್ಕರಣೆಗೆ ಒಪ್ಪಿಕೊಂಡರೆ ಸರಕಾರಿ ನೌಕರರಿಗೆ ನೀಡುವಂತೆ ಸಮಾನ ವೇತನದ ಬೇಡಿಕೆ ನೇಪಥ್ಯಕ್ಕೆ ಸರಿದಂತಾಗಲಿದೆ. ಆಗ ಕರ್ನಾಟಕ ರಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟದಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆಯೂ ಇದೆ. – ವಿಜಯಕುಮಾರ್ ಚಂದರಗಿ