ದೊಡ್ಡಬಳ್ಳಾಪುರ: ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ ಅವರು, ತಾಲೂಕಿನ ವಿವಿಧ ಮತಗಟ್ಟೆಗಳ ವ್ಯಾಪ್ತಿಯಲ್ಲಿನ ಪದವಿ ಪೂರ್ವ ಕಾಲೇ ಜು ಗಳಿಗೆ ಭೇಟಿ ನೀಡಿ, ಮತದಾರರ ನೋಂದಣಿ ಅಂದೋಲನ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಮತದಾನ ಮಾಡಲು ಅರ್ಹರಾಗಿರುವವರು ಯಾರು ಕೂಡ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಆ ನಿಟ್ಟಿನಲ್ಲಿ ತಾಲೂಕಾದ್ಯಂತ ಜಾಗೃತಿ ಮೂಡಿಸಲು ವಿವಿಧ ಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ.8ರವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದರು.
4 ದಿನ ವಿಶೇಷ ಅಭಿಯಾನ: ಹಲವು ಕಾರಣಗಳಿಂದ ತಮ್ಮ ಕುಟುಂಬದ ಸದಸ್ಯರು ಬಿಟ್ಟು ಹೋಗಿದ್ದಲ್ಲಿ ಅಥವಾ ಹೊಸದಾಗಿ ಸೇರ್ಪಡೆ ಆಗಿದ್ದರೆ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಮತ್ತು ತೆಗೆದು ಹಾಕಲು ಅವಕಾಶವಿದೆ. ಅಂತಿಮ ಪಟ್ಟಿಯನ್ನು 2023ರ ಜನವರಿ 5ರಂದು ಪ್ರಕಟಿಸ ಲಾಗುತ್ತದೆ. ನೋಂದಣಿ ಕಾರ್ಯವು ಪ್ರತಿನಿತ್ಯ ಚಾಲನೆ ಯಲ್ಲಿದ್ದು, ನ.20 ಮತ್ತು ಡಿಸೆಂಬರ್ 3, 4ರಂದು ಒಟ್ಟು 4 ದಿನ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಅಗತ್ಯ ದಾಖಲೆ ನೀಡಿ: ನವ ಮತ ದಾರರನ್ನು ಪಟ್ಟಿಗೆ ಸೇರ್ಪಡೆ ಮಾಡುವುದು. ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಕಾರ್ಯಗಳನ್ನು ಮಾಡಲು ಕಾಲೇಜಿಗಳಿಗೆ ಯೋಜಿಸಲಾಗಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಜೊತೆಗೆ ಸ್ಥಳೀಯ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆ ನೀಡಿ ನೋಂದಾಯಿಸಿ ಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿ ದರು.
ಸಹಾಯಕ ನಿರ್ದೇಶಕ ಕುಮಾರ್ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು ಇದ್ದರು.