Advertisement

ಮಾರುಕಟ್ಟೆಗೆ ಬರಲಿದೆ ಟಾಟಾ ಮೋಟಾರ್ಸ್‌ನ ಹೊಸ ಆವೃತ್ತಿಗಳು

11:15 AM Oct 17, 2019 | sudhir |

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮುಂದಿದ್ದ ಟಾಟಾ ಮೋಟಾರ್ಸ್‌ ನಿರ್ಮಾಣದ ನೆಕ್ಸಾನ್‌ ಕಂಪ್ಯಾಕ್ಟ್ ಎಸ್‌ಯುವಿ ಕಾರು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಫೇಸ್‌ಲಿಫ್ಟ್ ಹೊಸ ಮಾಡೆಲ್‌ನ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ಕಂಪೆನಿ, ಫೇಸ್‌ಲಿಫ್ಟ್ ಕಾರಿನಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಮಾಡಿದೆ.

Advertisement

ಟಾಟಾ ಮೋಟಾರ್ಸ್‌ ಸಂಸ್ಥೆ ಈಗಾಗಲೇ ಹೊಸ ಕಾರುಗಳ ಅಭಿವೃದ್ದಿಯಲ್ಲಿ ಭಾರೀ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಬರಲಿರುವ ಟಿಯಾಗೋ ಮತ್ತು ನೆಕ್ಸಾನ್‌ ಕಾರುಗಳ ಫೇಸ್‌ಲಿಫ್ಟ್ ಕಾರುಗಳ ಆವೃತ್ತಿಗಳಲ್ಲಿ ಹೊಸ ತಂತ್ರಜ್ಞಾನ ಪ್ರೇರಿತ ಅಲ್ಫಾ ಪ್ಲಾಟ್‌ಫಾರ್ಮ್ ಶೈಲಿಯಲ್ಲಿ ಅಭಿವೃದ್ಧಿಗೊಳಿಸಿರುವುದು ಟೆಸ್ಟ್‌ ಡ್ರೈವ್‌ನಿಂದ ತಿಳಿದುಬಂದಿದೆ.

ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್‌ ಪೆಟ್ರೋಲ್‌ ಮತ್ತು 1.5-ಲೀಟರ್‌ ಡೀಸೆಲ್‌ ಎಂಜಿನ್‌ ಆಯ್ಕೆಯನ್ನು ಹೊಂದಿರುವ ನೆಕ್ಸಾನ್‌ ಕಾರು ಫೇಸ್‌ಲಿಫ್ಟ್ ಆವೃತ್ತಿಯಲ್ಲೂ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂಜಿನ್‌ ಆಯ್ಕೆಗಳನ್ನೇ ಉನ್ನತೀಕರಿಸಲಾಗಿದ್ದು, ಫ್ರಂಟ್‌ ಬಾನೆಟ್‌, ಬಂಪರ್‌ ಡಿಸೈನ್‌, ಡಿಜಿಟಲ್‌ ಇನ್‌ಸ್ಟ್ರೆಮೆಂಟ್‌ ಕ್ಲಸ್ಟರ್‌, ಹೊಸ ತಂತ್ರಜ್ಞಾನ ಪ್ರೇರಿತ ಟಚ್‌ ಸ್ಕ್ರೀನ್‌ ಇನೊ³àಟೈನ್‌ಮೆಂಟ್‌ ಸೇರಿದಂತೆ ಕ್ಯಾಬಿನ್‌ ವಿನ್ಯಾಸದಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ.

ಟಾಟಾ ಸಂಸ್ಥೆಯು ನೆಕ್ಸಾನ್‌ ಫೇಸ್‌ಲಿಫ್ಟ್ ಜತೆಗೆ ನೆಕ್ಸಾನ್‌ ಎಲೆಕ್ಟ್ರಿಕ್‌ ಕಾರು ಮಾದರಿಯನ್ನು ಸಹ ಅಭಿವೃದ್ದಿಗೊಳಿಸಿ ಬಿಡುಗಡೆಗಾಗಿ ಸಿದ್ದಪಡಿಸಿದ್ದು, ಹೊಸ ಕಾರು ಅತ್ಯುತ್ತಮ ಬ್ಯಾಟರಿ ಸೌಲಭ್ಯದೊಂದಿಗೆ 300ಕಿ.ಮೀ ಮೈಲೇಜ್‌ ರೇಂಜ್‌ ಪಡೆದುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ನೆಕ್ಸಾನ್‌ ಎಲೆಕ್ಟ್ರಿಕ್‌ ಕೂಡಾ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಕೆಲವು ತಿಂಗಳ ಬಳಿಕ ಬಿಡುಗಡೆಯಾಗಲಿದ್ದು, ಕಾರಿನ ಬೆಲೆಯು ರೂ.15 ಲಕ್ಷದಿಂದ ರೂ.17 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next