Advertisement
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇದನ್ನು “ಭಾರತೀಯ ರೈಲ್ವೆಯ ಹೆಮ್ಮೆಯ ಕ್ಷಣ’ ಎಂದು ಬಣ್ಣಿಸಿದ್ದಾರೆ. ಇದರ ಮೂಲಕ ವಂದೇ ಭಾರತ್ ರೈಲಿನ ಮೂರನೇ ರೇಕುವಿನ ಪರೀಕ್ಷೆಯೂ ಯಶಸ್ವಿಯಾಗಿ ಪೂರ್ಣಗೊಂಡಂತಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರಿಂದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಪ್ರಾಯೋಗಿಕ ಸಂಚಾರವು ಪೂರ್ಣಗೊಂಡಿರುವ ಕಾರಣ, ಆದಷ್ಟು ಬೇಗ ಉಳಿದ 72 ರೈಲುಗಳ ಸರಣಿ ಉತ್ಪಾದನೆ ಆರಂಭವಾಗಲಿದೆ ಎಂದೂ ತಿಳಿಸಿದ್ದಾರೆ.
ಸೆಮಿ ಹೈಸ್ಪೀಡ್ ರೈಲುಗಳ ಹೊಸ ಅವತಾರದಲ್ಲಿ ಹಲವಾರು ಹೊಸ ಫೀಚರ್‌ಗಳಿವೆ. ಮೊದಲ ತಲೆಮಾರಿನ ವಂದೇ ಭಾರತ್ ರೈಲುಗಳ ವೇಗ ಗಂಟೆಗೆ 160 ಕಿ.ಮೀ. ಇದ್ದು, 54.6 ಸೆಕೆಂಡುಗಳಲ್ಲಿ 0-100 ಕಿ.ಮೀ. ವೇಗ ಪಡೆಯುತ್ತಿತ್ತು. ಆದರೆ, 3ನೇ ವಂದೇ ಭಾರತ್ ರೈಲಿನ ವೇಗ ಗಂಟೆಗೆ 180 ಕಿ.ಮೀ. ಆಗಿದ್ದು, 100 ಕಿ.ಮೀ. ವೇಗ ಪಡೆಯಲು ಕೇವಲ 52 ಸೆಕೆಂಡು ಸಾಕು.