Advertisement

Triumph: ಹೊಸ ಟ್ರಯಂಫ್ ಸ್ಪೀಡ್‌ 400- ಒಂದು ವೇರಿಯಂಟ್‌, ಮೂರು ಬಣ್ಣಗಳ ಆಯ್ಕೆ

09:15 PM Jul 18, 2023 | Team Udayavani |

ಟ್ರಯಂಫ್ ಮೋಟಾರ್‌ಸೈಕಲ್‌ ಇಂಡಿಯಾ ಕಂಪನಿಯು ತನ್ನ ಹೊಸ “ಸ್ಪೀಡ್‌ 400′ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಇದನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು.

Advertisement

ಹರ್ಲೆ-ಡೇವಿಡ್‌ಸನ್‌ನ ಎಕ್ಸ್‌440 ಮತ್ತು ರಾಯಲ್‌ ಎನ್‌ಫೀಲ್ಡ್‌ನ ಕ್ಲಾಸಿಕ್‌ 350ಗೆ ಪ್ರತಿಸ್ಪರ್ಧಿಯಾಗಿ ಸ್ಪೀಡ್‌ 400 ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಈ ನೂತನ ರೆಟ್ರೋ ಸ್ಟೈಲ್‌ ಮೋಟಾರು ಸೈಕಲ್‌ ಒಂದೇ ವೇರಿಯಂಟ್‌ನಲ್ಲಿ ಮತ್ತು ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ.

ಕಾರ್ನಿವಾಲ್‌ ರೆಡ್‌+ಫ್ಯಾಂಟಮ್‌ ಬ್ಲ್ಯಾಕ್‌, ಕ್ಯಾಸ್ಪಿಯನ್‌ ಬ್ಲೂ+ಸ್ಟಾರ್ಮ್ ಗ್ರೇ ಮತ್ತು ಫ್ಯಾಂಟಮ್‌ ಬ್ಲ್ಯಾಕ್‌ + ಸ್ಟಾರ್ಮ್ ಗ್ರೇ ಬಣ್ಣಗಳಲ್ಲಿ ಬೈಕ್‌ ಸಿಗಲಿದೆ. ವೃತ್ತಾಕಾರದ ಹೆಡ್‌ಲೈಟ್‌, ಬಾರ್‌ಎಂಡ್‌ ಮಿರರ್‌, 17 ಇಂಚು ಅಲಾಯ್‌ ವ್ಹೀಲ್‌ ಇರಲಿವೆ. ಎಲ್ಲ ಮೂರು ಬಣ್ಣಗಳ ಬೈಕ್‌ಗಳೂ ಸಮಾನ ಅಂದರೆ 2.33 ಲಕ್ಷ ರೂ. ದರದಲ್ಲಿ ಲಭ್ಯವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next