Advertisement

ಡೆಂಗ್ಯೂಗೆ ಇನ್ನು ಹೊಸ ಚಿಕಿತ್ಸೆ?

09:30 AM Jan 27, 2018 | Team Udayavani |

ಹೊಸದಿಲ್ಲಿ: ಚಿಕೂನ್‌ಗುನ್ಯಾ ಮತ್ತು ಡೆಂಗ್ಯೂಗೆ ಆಧುನಿಕ ವೈದ್ಯ ಪದ್ಧತಿಯ ಜತೆಗೆ ಭಾರತೀಯ ವೈದ್ಯ ಪದ್ಧತಿಯ ಚಿಕಿತ್ಸೆಯನ್ನೂ ಸಾರ್ವಜನಿಕರು ಪಡೆಯುತ್ತಿರುವುದು ಗೊತ್ತೇ ಇದೆ. ಇದೀಗ  ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಎರಡು ಸಿದ್ಧ ಮಾದರಿಯ ಔಷಧದ ಮೂಲಕ ಎರಡೂ ರೋಗಗಳು ಮಾನವನ ಶರೀರದ ಒಳಕ್ಕೆ ಪ್ರವೇಶಿಸುವುದಿಲ್ಲ ಎಂಬುದನ್ನು ಹೊಸದಿಲ್ಲಿಯಲ್ಲಿರುವ ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಜೆನೆಟಿಕ್‌ ಎಂಜಿನಿಯರಿಂಗ್‌ ಆ್ಯಂಡ್‌ ಬಯೋಟೆಕ್ನಾಲಜಿ (ಐಸಿಜಿಇಬಿ) ಯ ವಿಜ್ಞಾನಿಗಳು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. 

Advertisement

ಒಂದು ವೇಳೆ ಈ ಅಧ್ಯಯನ ನಿಜವೇ ಆದಲ್ಲಿ ದೇಶದಲ್ಲಿ ಸಾಂಪ್ರದಾಯಿಕ ವೈದ್ಯ ವ್ಯವಸ್ಥೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ. ಮಾತ್ರವಲ್ಲ ಸಾವಿರಾರು ಮಂದಿಗೆ ಚಿಕೂನ್‌ಗುನ್ಯಾದಿಂದ ಮುಕ್ತಿ ನೀಡಲೂ ಸಾಧ್ಯವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next