Advertisement

ನೂತನ ಮಂದಿರದ ನಿರ್ಮಾಣಕ್ಕೆ ಭಕ್ತರ ಸಹಕಾರ ಅಗತ್ಯ: ವಿನೋದ್‌ ವಾಘಸಿಯಾ

07:44 PM Feb 07, 2021 | Team Udayavani |

ಮುಂಬಯಿ: ಸಮಿತಿಯು ಕಳೆದ 17 ವರ್ಷಗಳಿಂದ ಸದಸ್ಯರ ಹಾಗೂ ಭಕ್ತರ ಸಹಾಕಾರದಿಂದ ಪ್ರತಿಯೊಂದು ಕಾರ್ಯಕ್ರಮವನ್ನೂ ಯಶಸ್ವಿಯಾಗಿ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಈ ಜಾಗದಲ್ಲಿ ಶ್ರೀ ಶನೀಶ್ವರ ಮಂದಿರದ ನಿರ್ಮಾಣದ ಕೆಲಸವು ಆರಂಭಗೊಳ್ಳಲಿದೆ. ಮಂದಿರದ ರೂಪುರೇಷೆಯು ವಾಸ್ತು ತಜ್ಞರ ಮತ್ತು ಧಾರ್ಮಿಕ ಚಿಂತಕರ ಸಲಹೆ ಸೂಚನೆಯನ್ನು ಪಡೆದು ಶೀಘ್ರದಲ್ಲೇ ತಯಾರಾಗಲಿದೆ. ಈ ಧಾರ್ಮಿಕ ಕಾರ್ಯಕ್ಕೆ ಸರ್ವ ಭಕ್ತರ ಸಹಕಾರ ಅಗತ್ಯ ಎಂದು ಸಮಿತಿಯ ಗೌರವಾಧ್ಯಕ್ಷ ಹಾಗೂ ಮಹಾಸಭೆಯ ಅದ್ಯಕ್ಷ ವಿನೋದ್‌ ವಾಘಸಿಯಾ ಹೇಳಿದರು.

Advertisement

ಅವರು ಜ. 24ರಂದು ಮಂದಿರದ ವಠಾರದಲ್ಲಿ ನಡೆದ ಸಂಸ್ಥೆಯ 17ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಅದಕ್ಷೆ ವಿದ್ಯಾ ಅಶೋಕ್‌ ಕರ್ಕೇರ ಅವರು ಮಾತನಾಡಿ, ತನ್ನೊಂದಿಗೆ ಹಲವಾರು ಯಶಸ್ವೀ ಕಾರ್ಯಕ್ರಮಗಳನ್ನು ನಡೆಸಲು ಸಹಕರಿಸಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಎಲ್ಲರ ಸಹಕಾರದಿಂದ ಭವ್ಯ ಶನೀಶ್ವರ ಮಂದಿರ ಶೀಘ್ರದಲ್ಲೇ ನಿರ್ಮಾಣವಾಗಲಿ ಎಂದರು. ಉಪಾಧ್ಯಕ್ಷರಾದ ಸಂಪತ್‌ ಶೆಟ್ಟಿ ಅವರು ಮಾತನಾಡಿ, 2004ರಲ್ಲಿ ಅಶೋಕ್‌ ಕರ್ಕೇರರ ಸಾರಥ್ಯದಲ್ಲಿ ಹಲವಾರು ಧಾರ್ಮಿಕ ಮುಖಂಡರ ಮತ್ತು ದಾನಿಗಳ ಸಹಕಾರದಿಂದ ಆರಂಭಗೊಂಡ ಶ್ರೀ ಶನೀಶ್ವರ ಸೇವಾ ಸಮಿತಿಯು ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಶ್ರದ್ಧಾಭಕ್ತಿಯ ಕೇಂದ್ರವಾಗಿ ಮೆರೆಯುತ್ತಿದೆ. ಮುಂದಿನ ದಿನಗಳಲ್ಲಿ ಗೌರವಾಧ್ಯಕ್ಷರಾದ ವಿನೋದ್‌ ವಾಘಸಿಯಾ ಹಾಗೂ ಅಧ್ಯಕ್ಷೆ ವಿದ್ಯಾ ಕರ್ಕೇರ ಅವರ ಸಂಪೂರ್ಣ ಬೆಂಬಲ ಮತ್ತು ಭಕ್ತರ ಸಹಕಾರದಿಂದ ಮೀರಾ-ಭಾಯಂದರ್‌ನಲ್ಲಿ ನಿರ್ಮಾಣವಾಗಲಿರುವ ಭವ್ಯ ಶನಿಮಂದಿರದ ನಿರ್ಮಾಣಕ್ಕೆ ನಾವೆಲ್ಲಾ ಸಹಕರಿಸೋಣ ಎಂದರು.

ಇದನ್ನೂ ಓದಿ:ಅತೀ ಹೆಚ್ಚು ಡೌನ್ ಲೋಡ್: ಟಿಕ್ ಟಾಕ್ ಹಿಂದಿಕ್ಕಿ ಅಗ್ರಸ‍್ಥಾನ ಪಡೆದ ಟೆಲಿಗ್ರಾಂ

ಮಂದಿರದಲ್ಲಿ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ಶ್ರದ್ಧಾಭಕ್ತಿಯಿಂದ ನಡೆಯುತ್ತಿದ್ದು, ಕಾರ್ಯಕಾರಿ ಸಮಿತಿಯ ಸದಸ್ಯರ ಉತ್ತಮ ಕಾರ್ಯ ತತ್ಪರತೆಯಿಂದ ಕ್ಷೇತ್ರದ ಮೇಲಿನ ನಂಬಿಕೆ ಇಟ್ಟು ಬರುವ ಭಕ್ತರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚಾಗುತ್ತಿರುವುದು ಈ ಜಾಗದ ವಿಶೇಷತೆಯಾಗಿದೆ. ಇಂಥಹ ಪವಿತ್ರ ಕ್ಷೇತ್ರದಲ್ಲಿ ದೇವರ ಸೇವೆಯನ್ನು ಮಾಡುವ ಅವಕಾಶ ಸಿಕ್ಕಿರುವುದು ಈ ಸಮಿತಿಯ ಸದಸ್ಯರ ಸೌಭಾಗ್ಯ ಎಂದು ಧಾರ್ಮಿಕ ಚಿಂತಕ, ವಿದ್ವಾನ್‌ ರಾಧಾಕೃಷ್ಣ ಭಟ್‌ ಅವರು ನುಡಿದು ಆಶೀರ್ವಚನ ನೀಡಿ ಶುಭಹಾರೈಸಿದರು.

Advertisement

ತುಳುನಾಡ ಸೇವಾ ಸಮಾಜ ಮೀರಾ-ಭಾಯಂದರ್‌ ಅಧ್ಯಕ್ಷರಾದ ಡಾ| ರವಿರಾಜ್‌ ಸುವರ್ಣ, ಮಹಿಳಾ ವಿಭಾಗದ ಅದ್ಯಕ್ಷೆ ಮಲ್ಲಿಕಾ ಶೆಟ್ಟಿ,ಉಪಾಧ್ಯಕ್ಷ ಗುಣಕಾಂತ ಶೆಟ್ಟಿ ಕರ್ಜೆ, ವಸಂತಿ ಶೆಟ್ಟಿ. ಮತ್ತು ಕಾರ್ಕಳ ಸದಾನಂದ್‌ ಪೂಜಾರಿಯವರು ಸಮಿತಿಯಲ್ಲಿ 2004ರಿಂದ ನಡೆದು ಬಂದ ಧಾರ್ಮಿಕ ಕಾರ್ಯದ ಬಗ್ಗೆ ಸಂದಭೋìಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೋಶಾಧಿಕಾರಿ ಅಚ್ಚುತಾ ಕೋಟ್ಯಾನ್‌, ಮಾಲಾ ಜೈನ್‌, ಜತೆ ಕೋಶಾಧಿಕಾರಿ ಜಯಕರ ಶೆಟ್ಟಿ ಮುದ್ರಾಡಿ ಉಪಸ್ಥಿತದ್ದರು. ಕಾರ್ಕಳ ಸದಾನಂದ್‌ ಅವರು ವಂದಿಸಿದರು.
ಮಹಾಸಭೆಯಲ್ಲಿ ಸದಸ್ಯರ ಅನುಮತಿಯೊಂದಿಗೆ ಕಾರ್ಯಕಾರಿ ಸಮಿತಿಯ ಕೆಲವು ಸ್ಥಾನಗಳನ್ನು ಬದಲಾವಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next