Advertisement

ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿ: ಶಶಿಕಾಂತ್‌ ಪಡುಬಿದ್ರಿ

12:15 AM Sep 26, 2019 | sudhir |

ಪಡುಬಿದ್ರಿ: ನೂತನ ತಂತ್ರಜ್ಞಾನ ಅಳವಡಿಸಿಕೊಂಡು ರೈತರು ಕೃಷಿಯಲ್ಲಿ ಮುಂದುವರಿಯಬೇಕು. ಇತರ ಎಲ್ಲ ಕೃಷಿಯಂತ್ರಗಳಿಗೆ ಇಲಾಖೆ ಮೂಲಕ ಸಹಾಯಧನ ಲಭಿಸುತ್ತಿದ್ದು, ತೆಂಗಿನ ಮರ ಹತ್ತುವ ಯಂತ್ರ ಒದಗಿಸಲು ಕಡಿಮೆ ದರದಲ್ಲಿ ಸಹಕಾರಿ ಸಂಘಗಳು ಮುಂದಾಗಬೇಕು ಎಂದು ಜಿ. ಪಂ. ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ ಹೇಳಿದರು.

Advertisement

ಉಡುಪಿ ಜಿ.ಪಂ. ಕೃಷಿ ಇಲಾಖೆ, ಆತ್ಮ ಅನುಷ್ಠಾನ ಸಮಿತಿ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘ, ಹೆಜಮಾಡಿ ಹಾಲು ಉತ್ಪಾದಕರ ಸಹಕಾರಿ
ಸಂಘಗಳ ಸಹಯೋಗದಲ್ಲಿ ಹೆಜಮಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಸಭಾಭವನದಲ್ಲಿ ಸೆ. 25ರಂದು ಆಯೋಜಿ ಸಿದ್ದ ಕೃಷಿ, ಹೈನುಗಾರಿಕೆ, ತೋಟಗಾರಿಕೆ ಬಗ್ಗೆ ತಾಂತ್ರಿಕ ಮಾಹಿತಿ, ಯಂತ್ರದ ಮೂಲಕ ತೆಂಗಿನ ಮರ ಹತ್ತುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಮತ್ತೆ ಕೃಷಿ ಯಲ್ಲೇ ತೊಡಗುವ ಸಮಯ ಬಂದಿದೆ. ಶೇ.

10 ಮಳೆ ಬರುವ ಇಸ್ರೇಲ್‌ ದೇಶವು
ತಂತ್ರಜ್ಞಾನ ಬಳಸಿ ಕೃಷಿಯಲ್ಲಿ ಯಶಸ್ವಿ ಯಾದಂತೆ ಇಲ್ಲಿನ ರೈತರು ತಂತ್ರಜ್ಞಾನ ಅಳವಡಿಸಿಕೊಂಡು ಲಾಭ ಗಳಿಸಬೇಕು. ತೆಂಗಿನ ಮರ ಹತ್ತುವ ಯಂತ್ರವನ್ನು ರಿಯಾಯಿತಿ ದರದಲ್ಲಿ ನೀಡುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ವೈ. ಸುಧೀರ್‌ಕುಮಾರ್‌ ತಿಳಿಸಿದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ನವೀನ್‌ ಎನ್‌.ಇ. ಕರಾವಳಿಯಲ್ಲಿ ಭತ್ತದ ಕೃಷಿ ಕಡಿಮೆ ಯಾಗುತ್ತಿರುವ ಪರಿಣಾಮ ಜಲಕ್ಷಾಮದ ಭೀತಿ ಎದುರಾಗುತ್ತಿದೆ. ವೈಜ್ಞಾನಿಕ ಪದ್ಧತಿಯಲ್ಲಿ ಭತ್ತದ ಕೃಷಿ ಮಾಡಿ ಮೂಲ ಸಂಪನ್ಮೂಲವಾದ ನೀರಿನ ಸಂಗ್ರಹಕ್ಕೆ ಕೈಜೋಡಿಸಬೇಕು ಎಂದರು.

ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ತೋಟಗಾರಿಕೆ ಬೆಳೆಗಳ ಬಗ್ಗೆ ತಿಳಿಸಿದರು. ದ.ಕ. ಹಾಲು ಉತ್ಪಾದಕರ ಒಕ್ಕೂಟದ ಮಣಿಪಾಲ ಡೈರಿ ಉಪ ವ್ಯವಸ್ಥಾಪಕ ಡಾ| ಅನಿಲ್‌ ಕುಮಾರ್‌ ಶೆಟ್ಟಿ ಹೈನುಗಾರಿಕೆ ಬಗ್ಗೆ ಮಾಹಿತಿ ನೀಡಿದರು.

Advertisement

ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್‌ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌, ಸದಸ್ಯೆ ರೇಣುಕಾ ಪುತ್ರನ್‌, ಹೆಜಮಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶಿವರಾಮ ಶೆಟ್ಟಿ, ಗ್ರಾ.ಪಂ. ಸದಸ್ಯ ಪ್ರಾಣೇಶ್‌ ಹೆಜಮಾಡಿ, ಪಡುಬಿದ್ರಿ ಸಿ.ಎ. ಬ್ಯಾಂಕ್‌ ಉಪಾಧ್ಯಕ್ಷ ಗುರುರಾಜ ಪೂಜಾರಿ, ನಿರ್ದೇಶಕ ಗಿರೀಶ್‌ ಪಲಿಮಾರ್‌ ಉಪಸ್ಥಿತರಿದ್ದರು.
ಸಹಾಯಕ ಕೃಷಿ ಅಧಿಕಾರಿ ವಾದಿರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಷ್ಪಲತಾ ಸ್ವಾಗತಿಸಿದರು. ಆತ್ಮ ಅನುಷ್ಠಾನ ಸಮಿತಿಯ ಸಂಜನಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next