ಹೊಸದಿಲ್ಲಿ: ವಾಹನ ಚಲಾಯಿಸಲು ಚಾಲಕನು ಕುಡಿದು ಚಾಲನೆ ಮಾಡಲು ಬಂದಿದ್ದರೆ ವಾಹನ ಚಾಲನೆ ಆಗುವುದೇ ಇಲ್ಲ! ಅಷ್ಟೇ ಅಲ್ಲ, ಡ್ರೈವರ್ ತನ್ನ ಸೀಟ್ ಬೆಲ್ಟ್ ಧರಿಸದಿದ್ದರೂ ವಾಹನ ಸ್ಟಾರ್ಟ್ ಆಗುವುದೇ ಇಲ್ಲ! ಇಂಥ ಅಂಶಗಳು ಅಡಕವಾಗಿರುವ ಮಹತ್ವದ ತಂತ್ರಜ್ಞಾನವನ್ನು ಭೂ ಸೇನೆಯ ಕ್ಯಾಪ್ಟನ್ ಓಂಕಾರ್ ಕಾಳೆ ನೇತೃತ್ವದ ಯೋಧರ ತಂಡವೊಂದು ರೂಪಿಸಿದೆ. ಕುಡುಕ ಡ್ರೈವರ್‌ಗಳಿಂದ ಭೂಸೇನೆಯ ಟ್ರಕ್‌ಗಳು ಪದೇ ಪದೆ ಅಪಘಾತಕ್ಕೀಡಾ ಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ತಂತ್ರಜ್ಞಾನ ರೂಪಿಸಲಾಗಿದೆ. ಕಳೆದ ವರ್ಷ, ಉತ್ತರಾಖಂಡದ ಅಲ್ಮೋ ರಾದಲ್ಲಿರುವ ಉತ್ತರಾಖಂಡ ರೆಸಿಡೆನ್ಶಿಯಲ್ ವಿಶ್ವವಿದ್ಯಾಲಯದ ಸಿಬಂದಿ, ಹಲ್ಡ್‌ವಾನಿ ಮೂಲದ ಆರ್.ಐ. ಇನ್ಸುಮಂಟ್ಸ್ ಆ್ಯಂಡ್ ಇನೋವೇಷನ್ ಇಂಡಿಯಾ ಎಂಬ ಸಂಸ್ಥೆಯ ಸಿಬಂದಿ ಈಗ ಓಂಕಾರ್ ಕಾಳೆ ನೇತೃತ್ವದ ತಂಡ ರೂಪಿಸಿದಂಥ ತಂತ್ರಜ್ಞಾನವನ್ನೇ ರೂಪಿಸಿತ್ತು. ಅದರ ಮತ್ತೂಂದು ವಿಶೇಷವೇನಿತ್ತೆಂದರೆ, ಚಾಲಕ ತೂಕಡಿಸುತ್ತಾ ವಾಹನ ಚಲಾಯಿಸುತ್ತಿದ್ದರೆ ತಕ್ಷಣವೇ ವಾಹನದ ಇಂಜಿನ್ ಆಫ್ ಆಗುವಂಥ ಸೌಲಭ್ಯವನ್ನೂ ಅಳವಡಿಸಲಾಗಿತ್ತು.