Advertisement
ಲೋಕಸಭೆಯಲ್ಲಿ ಶುಕ್ರವಾರ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ, ಹೊಸ ಪದ್ಧತಿಯನ್ನು ಸಮರ್ಥಿಸಿಕೊಂಡ ಅವರು, “ಈ ಹಿಂದೆ 2.5 ಲಕ್ಷ ರೂ. ಇದ್ದ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರೂ.ಗೆ ಏರಿಸಲಾಗಿದೆ. ಜತೆಗೆ, 50 ಸಾವಿರ ರೂ.ಗಳ ಸ್ಟಾಂಡರ್ಡ್ ಡಿಡಕ್ಷನ್‌ಗೂ ಅವಕಾಶ ಕಲ್ಪಿಸಲಾಗಿದೆ. 7 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲವಾದ್ದರಿಂದ ಮಧ್ಯಮ ವರ್ಗಕ್ಕೆ ಅನುಕೂಲ ವಾಗಿದೆ ಎಂದರು.
“ಒಬ್ಬ ವ್ಯಕ್ತಿ’ಯನ್ನು ಗಮನದಲ್ಲಿಟ್ಟು ಕೊಂಡ ಬಜೆಟ್ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಸಚಿವೆ, “ಬಿಜೆಪಿ ಜೀಜಾಜೀ ಮತ್ತು ಭತೀಜಾಗಳ ಪಕ್ಷವಲ್ಲ. ಸಂಬಂಧಿಕರಿಗಷ್ಟೇ ಅನುಕೂಲ ಕಲ್ಪಿಸುವುದು ಅವರ(ಕಾಂಗ್ರೆಸ್) ಸಂಸ್ಕೃತಿ. ನಮ್ಮ ಸರಕಾರವು ಇಡೀ ದೇಶವನ್ನು ಗಮನದಲ್ಲಿಟ್ಟು ನೀತಿ ನಿಯಮ ರೂಪಿಸುತ್ತದೆ’ ಎಂದರು.