ತಿನಿಸುಗಳನ್ನು, ಈಗ ಮನೆಯಲ್ಲೇ ಮಾಡಲು ಸಮಯ ಸಿಕ್ಕಿದೆ. ಈ ಕಾರಣದಿಂದ ಲಾಕ್‌ಡೌನ್ ಸಹ ಸಹ್ಯವೆನ್ನಿಸುತ್ತಿದೆ. ಮಗಳ ಬೇಡಿಕೆಯ ಪಟ್ಟಿ ಉದ್ದ ಇರುವುದರಿಂದ ಮತ್ತು ಮಾಡಿದ್ದನ್ನು ಪಟ್ಟಾಗಿ ತಿಂದು “ಶಬ್ಟಾಶ್’ ಅನ್ನುತ್ತಿರುವುದರಿಂದ, ಸಾಕಷ್ಟು ಹೊಸ ಖಾದ್ಯ ತಯಾರಿಸುವುದನ್ನು ಕಲಿತಿದ್ದೇನೆ.
Advertisement
ಶಾಲೆಗೆ ಕಳಿಸುವ ಗಡಿಬಿಡಿ, ಹೋಂವರ್ಕ್ ಮಾಡಿಸುವ ತಲೆನೋವು ಎರಡೂ ಇಲ್ಲದೇ, ಯಜಮಾನರೂ ಮನೆಯಲ್ಲೇ ಇರುವುದರಿಂದ, ಟೈಂಗೆ ಸರಿಯಾಗಿ ಯಾವುದನ್ನೂ ಮಾಡಬೇಕಾಗಿಲ್ಲ. ಹಾಗಾಗಿ, ಹಿಂದೆ ನೋಡಬೇಕೆಂದು ಲಿಸ್ಟ್ ಮಾಡಿಕೊಂಡಿದ್ದ ಬೇರೆ ಬೇರೆ ಭಾಷೆಗಳ ಸಿನಿಮಾ, ವೆಬ್ ಸೀರಿಸ್ ನೋಡಲು ಸಮಯ ಸಿಕ್ಕಿದೆ. ಮಗಳಿಗೆ ಡ್ರಾಯಿಂಗ್ ಹೇಳಿಕೊಡುವ, ಎರಡು ದಿನಕ್ಕೆ ಒಂದಾದರೂ ಕಥೆಯನ್ನು ತಪ್ಪದೇ ಓದಿಸುವ ಮಹತ್ಕಾರ್ಯದ ಜೊತೆಗೆ, ತೋಚಿದ್ದು ಗೀಚುವ ನನ್ನ ಹವ್ಯಾಸವೂ ಸೇರಿ, ಸಮಯ ಕಳೆಯುತ್ತಿರುವುದೇ ತಿಳಿಯುತ್ತಿಲ್ಲ.