ಔರಂಗಾಬಾದ್:ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಪತ್ತೆಯಾದ ನೂತನ ಪ್ರಭೇದದ ಹಾವಿಗೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಕಿರಿಯ ಪುತ್ರ ತೇಜಸ್ ಠಾಕ್ರೆಯ ಹೆಸರನ್ನು ಇಡಲಾಗಿದೆ ಎಂದು ವರದಿ ತಿಳಿಸಿದೆ.
ಹೊಸ ಜಾತಿಗೆ ಹಾವಿಗೆ ತೇಜಸ್ ಹೆಸರಿಡಲು ಕಾರಣವೇನು?
ಇದು ಸಾಮಾನ್ಯವಾಗಿ ಬೆಕ್ಕಿನ ಜಾತಿಗೆ ಸೇರಿದ ಪ್ರಭೇದಗಳು ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಕೆಲವು ಪಶ್ಚಿಮಘಟ್ಟದ ಪ್ರದೇಶದಲ್ಲಿಯೂ ಈ ಜಾತಿಯ ಹಾವುಗಳು ಕಂಡುಬರುತ್ತದೆ. ಈ ನೂತನ ಪ್ರಭೇದದ ಹಾವನ್ನು ತೇಜಸ್ ಠಾಕ್ರೆ ಮೊದಲ ಬಾರಿಗೆ ಪತ್ತೆ ಹಚ್ಚಿ ಅದರ ಬಗ್ಗೆ ಅಧ್ಯಯನ ನಡೆಸಿದ್ದರು.
ಹೊಸ ಪ್ರಭೇದದ ಹಾವಿನ ಕುರಿತು ಅಧ್ಯಯನ ನಡೆಸಿದ ಬಗ್ಗೆ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ(ಬಿಎನ್ ಎಚ್ ಎಸ್) ಪ್ರಕಟಿಸಿರುವ ಜರ್ನಲ್ ನಲ್ಲಿ ವಿವರ ನೀಡಿದೆ ಎಂದು ವರದಿ ವಿವರಿಸಿದೆ.
ಈ ಜಾತಿಯ ಹಾವು ಭಾರತದಾದ್ಯಂತ ಕಾಣಸಿಗುತ್ತದೆ. ಆದರೆ ಕೆಲವು ಪ್ರಭೇದಗಳು ಮಾತ್ರ ಪಶ್ಚಿಮಘಟ್ಟದಲ್ಲಿ ಇರುವುದನ್ನು ತೇಜಸ್ ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ಅವರ ಸಂಶೋಧನೆಯ ಕೊಡುಗೆಗಾಗಿ ಅದಕ್ಕೆ “ಠಾಕ್ರೆ ಕ್ಯಾಟ್ ಸ್ನೇಕ್” ಎಂದು ಹೆಸರಿಡಲಾಗಿದೆ ಎಂದು ಪಿಬಿಎಫ್ ಬಿ ಸಿಯ ನಿರ್ದೇಶಕ ವರದ್ ಗಿರಿ ತಿಳಿಸಿದ್ದಾರೆ.