ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ ಆರು ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಂದು ಏಳು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 89 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಒಟ್ಟು ದೃಢೀಕೃತ ಪ್ರಕರಣಗಳು 120. ಆದರೆ ಇದರಲ್ಲಿ ಒಟ್ಟಾರೆ 31 ಮಂದಿ ಗುಣಮುಖರಾಗಿರುವುದರಿಂದ 89 ಜನರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ 257 ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಆರು ಪಾಸಿಟಿವ್ ವರದಿಯಾಗಿದೆ. ಉಳಿದ 251 ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿದೆ.
ಇಂದಿನ ಪ್ರಕರಣಗಳಲ್ಲಿ ಐದು ಪ್ರಕರಣಗಳು ಗುಂಡ್ಲುಪೇಟೆ ಪಟ್ಟಣಕ್ಕೆ ಸೇರಿವೆ. ಒಂದು ಪ್ರಕರಣ ಕೊಳ್ಳೇಗಾಲ ತಾಲೂಕಿನದ್ದಾಗಿವೆ. ವಿವರ ಇಂತಿದೆ:
ರೋಗಿ ಸಂಖ್ಯೆ 116: 14 ವರ್ಷದ ಬಾಲಕ ಗುಂಡ್ಲುಪೇಟೆ, ಸಂಖ್ಯೆ: 117: 45 ವರ್ಷದ ಮಹಿಳೆ, ಗುಂಡ್ಲುಪೇಟೆ, ಸಂಖ್ಯೆ 118: 20 ವರ್ಷದ ಯುವತಿ, ಗುಂಡ್ಲುಪೇಟೆ, ಸಂಖ್ಯೆ 119: 12 ವರ್ಷದ ಬಾಲಕಿ, ಗುಂಡ್ಲುಪೇಟೆ. ಸಂಖ್ಯೆ 120: 25 ವರ್ಷದ ಯುವಕ, ಗುಂಡ್ಲುಪೇಟೆ. ಸಂಖ್ಯೆ 121: 45 ವರ್ಷದ ಮಹಿಳೆ (ಇವರೆಲ್ಲರೂ ಪಿ.18544 ರೋಗಿಯ ಸಂಪರ್ಕಿತರು) ಕೊಳ್ಳೇಗಾಲ ತಾಲೂಕಿನ ನಂಜಯ್ಯನಕಟ್ಟೆ. (ಬೆಂಗಳೂರಿನಿಂದ ಬಂದವರು).
ಇಂದು ಗುಣಮುಖರಾಗಿ ಬಿಡುಗಡೆಯಾದವರು: 24 ವರ್ಷದ ಯುವತಿ, ಬದನಗುಪ್ಪೆ, ಚಾ.ನಗರ ತಾ. 55 ವರ್ಷದ ಪುರುಷ ಗೌಡಹಳ್ಳಿ ಯಳಂದೂರು ತಾ., 45 ವರ್ಷದ ಮಹಿಳೆ ಗೌಡಹಳ್ಳಿ, 41 ವರ್ಷದ ಮಹಿಳೆ ಬರಗಿ, ಗುಂಡ್ಲುಪೇಟೆ ತಾ., 50 ವರ್ಷದ ಮಹಿಳೆ ಗುಂಡ್ಲುಪೇಟೆ ಪಟ್ಟಣ, 25 ವರ್ಷದ ಯುವತಿ, ಗುಂಡ್ಲುಪೇಟೆ ಪಟ್ಟಣ, 17 ವರ್ಷದ ಯುವತಿ, ಕೊಳ್ಳೇಗಾಲ ಪಟ್ಟಣ.