Advertisement
ಬೆಂಗಳೂರಿನ ವಿಧಾನಸೌಧದ 3ನೇ ಮಹಡಿಯ ಸಮಿತಿ ಸಭಾಂಗಣದಲ್ಲಿ, ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಸಂಬಂಧ ನಡೆದ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಸವಾಂಗೀಣ ಪ್ರಗತಿ ದೃಷ್ಟಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಅನುಷ್ಠಾನ ತೀರಾ ಅಗತ್ಯವಾಗಿದೆ. ಯೋಜನೆಯ ಜಾರಿ ತುರ್ತಾಗಿ ಆಗಬೇಕಿದೆ. ಆರ್ಥಿಕ ಇಲಾಖೆ ಅನುಮೋದನೆ, ಟೆಂಡರ್ ಪ್ರಕ್ರಿಯೆ ಇನ್ನಿತರ ಅವಶ್ಯಕ ಕ್ರಮಗಳಿಗೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿಕೊಂಡು ಶೀಘ್ರವೇ ಯೋಜನೆ ಚಾಲನೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
Related Articles
Advertisement
ಯೋಜನೆ ಕುರಿತು ವರದಿ ಸಲ್ಲಿಸಲು ಸೂಚನೆ: ಕೆರೆಗಳಿಗೆ ನೀರು ತುಂಬಿಸುವ ಒಟ್ಟು 7 ಯೋಜನೆಗಳ ಪೈಕಿ 3 ಯೋಜನೆಗಳಿಗೆ 745 ಕೋಟಿ ರೂ. ಅಂದಾಜು ಮೊತ್ತವಾಗಿದೆ. ಈ ಯೋಜನೆಗೆ ಈಗಾಗಲೇ ಅಂದಾಜು ಪರಿಶೀಲನಾ ಸಭೆಯಲ್ಲಿ ಮಂಡಿಸಿ ತೆರವು ಪಡೆಯಲಾಗಿದೆ. ಉಳಿದ 4 ಯೋಜನೆಗಳಿಗೆ ಹೊಸದಾಗಿ ಒಟ್ಟು 749 ಕೋಟಿ ರೂ. ವೆಚ್ಚದ ಅಂದಾಜು ಮೊತ್ತದ ಲೈನ್ ಡಿಪಿಆರ್ ಆಗಿದೆ. ಇದಕ್ಕೆ ವಿಸೃತ ಯೋಜನೆ ವರದಿ ಅಂತಿಮಗೊಳಿಸಬೇಕು ಎಂದು ಸಚಿವ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ಯೋಜನೆ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಬಾಕಿಯಿರುವ ಎಲ್ಲಾ ರೂಪುರೇಷೆಗಳನ್ನು ಅಂತಿಮಗೊಳಿಸಿ ಅನುಮೋದನೆ ಪಡೆದುಕೊಳ್ಳಬೇಕು. ವಿಳಂಬ ಮಾಡದೇ ಯೋಜನೆ ಜಾರಿಗೆ ಮುಂದಾಗಲು ಹಿರಿಯ ಅಧಿಕಾರಿಗಳೇ ಕ್ರಮ ತೆಗೆದುಕೊಳ್ಳಬೇಕು ಎಂದರು.